ದಕ್ಷಿಣ ಭಾರತದ ಮೊದಲ ವಜ್ರಾಭರಣ ವಿನ್ಯಾಸ ಕಲಿಕೆಯ ಕೋರ್ಸ್ ಬೆಂಗಳೂರಲ್ಲಿ ಆರಂಭ

Prasthutha|

ಬೆಂಗಳೂರು: ದಕ್ಷಿಣ ಭಾರತದಲ್ಲಿಯೇ ಮೊದಲ ಭಾರಿಗೆ ವಜ್ರಾಭರಣ ವಿನ್ಯಾಸ, ತಯಾರಿಕೆಯ ವಿಧಾನಗಳನ್ನು ರಚನಾತ್ಮಕವಾಗಿ ತಿಳಿಸುವ ಕೋರ್ಸ್ ಗೆ ಬೆಂಗಳೂರಿನಲ್ಲಿ ಆರಂಭವಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಖ್ಯಾತ ಫ್ಯಾಶನ್ ಗುರುಪ್ರಸಾದ್ ಬಿಡ್ಡಪ ಹೇಳಿದ್ದಾರೆ.

- Advertisement -


ಬೆಂಗಳೂರಿನಲ್ಲಿ ನೂತನವಾಗಿ ಆರಂಭಗೊಂಡ ಐಐಜಿ ಬೆಂಗಳೂರು ವಜ್ರಾಭರಣ ವಿನ್ಯಾಸ ಕಲಿಕೆಯ ಕೋರ್ಸ್ ಗಳ ಬ್ರೋಚರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಫ್ಯಾಶನ್ ಜಗತ್ತಿನಲ್ಲಿ ವಿವಿಧ ವಿನ್ಯಾಸದ ವಜ್ರಾಭರಣಗಳನ್ನು ಧರಿಸುವುದು ಕೂಡ ಟ್ರೆಂಡ್ ಆಗಿದೆ. ರಾಮಾಯಣ-ಮಹಾಭಾರತದ ಕಾಲದಿಂದಲೂ ವಿವಿಧ ಶೈಲಿಯ ಆಭರಣ ಧರಿಸುವುದಕ್ಕೆ ಮಹತ್ವ ಇದೆ. ಈ ನಿಟ್ಟಿನಲ್ಲಿ ಹೊಸದಾಗಿ ಆರಂಭವಾಗಿರುವ ಕೋರ್ಸ್ ಗಳು ಮಾರ್ಗದರ್ಶನ ಮಾಡಲಿ ಎಂದು ಪ್ರಸಾದ್ ಹೇಳಿದರು.


ಮುಂಬೈ ಐಐಜಿ ಎಂಡಿ ರಾಹುಲ್ ದೇಸಾಯಿ ಮಾತನಾಡಿ ವಜ್ರದ ಉದ್ಯಮದಲ್ಲಿ ರಚನಾತ್ಮಕವಾದ ಕಲಿಕೆಯು ಹೆಚ್ಚಿನ ಅವಕಾಶ ಮತ್ತು ಯಶಸ್ಸನ್ನು ತಂದು ಕೊಡುತ್ತದೆ. ಕಲಿಕೆಯ ಗುಣಮಟ್ಟವು ಭವಿಷ್ಯದ ಉದ್ಯಮದ ಬೆಳವಣಿಗೆಗೆ ಉತ್ತೇಜನಕಾರಿಯಾಗಿದೆ. ಸದ್ಯ ಈ ಕೋರ್ಸ್ ಗಳು ಮುಂಬೈ ವಿಶ್ವವಿದ್ಯಾಲಯಗಳ ಸಹಯೋಗಹೊಂದಿದೆ. ಬೆಂಗಳೂರಿನ ಕಾರ್ಪೊರೇಟ್ ವಿವಿಗಳ ಸಹಯೋಗಕ್ಕೆ ಪ್ರಯತ್ನಿಸಲಾಗುವುದು ಎಂದರು.

- Advertisement -


ಬೆಂಗಳೂರು ಜ್ಯೂಯಲರ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ರವಿಕುಮಾರ್ ಮಾತನಾಡಿ ಚಿನ್ನಾಭರಣಗಳ ವಹಿವಾಟನ್ನು ಯಾರು ಬೇಕಾದರೂ ಮಾಡಬಹುದು. ಆದರೆ ನಿರ್ದಿಷ್ಟ ಕಲಿಕೆಯ ಮೂಲಕ ಜ್ಞಾನವನ್ನು ವೃದ್ಧಿಸಿಕೊಂಡರೆ, ತಲೆಮಾರಿಗೆ ಹೊಸ ಸಾಧ್ಯತೆಗಳನ್ನು ಕೊಡಬಹುದು. ಇದು ವಹಿವಾಟು ವೃದ್ಧಿಗೆ ಸಹಕಾರಿಯಾಗುತ್ತದೆ ಈ ನಿಟ್ಟಿನಲ್ಲಿ ಐಐಜಿ ಬೆಂಗಳೂರು ಸಂಸ್ಥೆಯ ಕೋರ್ಸ್ ಗಳು ಸಹಾಯಕವಾಗಲಿದೆ. ಬೆಂಗಳೂರು ಆಭರಣ ಉತ್ಪಾದನಾ ಹಬ್ ಆಗಿದೆ. ಕಲಾಕುಸುರಿ, ವಿನ್ಯಾಸದ ಕೊರತೆ ಇದ್ದ ಸಂದರ್ಭದಲ್ಲಿ ಐಐಜಿ ಸಂಸ್ಥೆ ಅದನ್ನು ತುಂಬಿದೆ ಇದು ಸಂತೋಷ ಸಂಗತಿ ಎಂದರು.
ಉದ್ಘಾಟನಾಸಮಾರಂಭದಲ್ಲಿ ಲಕ್ಷ್ಮಿಡೈಮಂಡ್ಸ್ ಇಓ ಚೇತನ್ ಕುಮಾರ್ ಮೆಹ್ತಾ ಮತ್ತು ಇತರ ಗಣ್ಯರು ಹಾಜರಿದ್ದರು

Join Whatsapp