ದಕ್ಷಿಣ ಭಾರತ ಮಟ್ಟದ ಪೆಂಕಾಕ್ ಸಿಲಾತ್ ಚಾಂಪಿಯನ್‌ಶಿಪ್ : ಕಂಚಿನ ಪದಕ ಪಡೆದ ದಕ್ಷಿಣಕನ್ನಡದ ಕಾರ್ತಿಕ್ ಎಂ.

Prasthutha|

- Advertisement -

ಮಂಗಳೂರು: ದಕ್ಷಿಣ ಭಾರತ ಮಟ್ಟದ ಪೆಂಕಾಕ್ ಸಿಲಾತ್ ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಕಾರ್ತಿಕ್ ಎಂ. ಕಂಚಿನ ಪದಕ ಪಡೆದಿರುತ್ತಾರೆ.

ಕೇರಳ ರಾಜ್ಯದ ತಿರುವನಂತಪುರದಲ್ಲಿರುವ ಜಿಮ್ಮಿ ಜಾರ್ಜ್ ಒಳಾಂಗಣ ಕ್ರೀಡಾಂಗಣದಲ್ಲಿ ಅ.1ರಿಂದ ಅ.2 ರವರೆಗೆ ನಡೆದ ದಕ್ಷಿಣ ಭಾರತ ಮಟ್ಟದ ನಾಲ್ಕನೇ ಪೆಂಕಾಕ್ ಸಿಲಾತ್ ಚಾಂಪಿಯನ್ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ಟ್ಯಾಂಡಿಂಗ್ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ತಿಕ್.M ಕಂಚಿನ ಪದಕ ಪಡೆದು ಅಮೋಘ ಸಾಧನೆ ಮಾಡಿರುತ್ತಾರೆ.

- Advertisement -

ಇವರು ಆಸೀಫ್ ಕಿನ್ಯ ಹಾಗೂ ಸಲ್ಮಾನ್ ಕುದ್ರೋಳಿ ಬಳಿ ತರಬೇತಿಯನ್ನು ಪಡೆದಿರುತ್ತಾರೆ.