ರಿಯಾದ್: ವಿಸಿಟ್ ವೀಸಾ ಅವಧಿ ಮುಗಿಯುವ ಮುನ್ನವೇ ಸೌದಿಯಿಂದ ತೆರಳಲು ಸರಕಾರದ ಆದೇಶ

Prasthutha|

ರಿಯಾದ್: ವಿಸಿಟ್ ವೀಸಾದಲ್ಲಿ ಸೌದಿ ಅರೇಬಿಯಾಗೆ ತೆರಳಿ ನೆಲೆಸಿರುವವರು ತಮ್ಮ ವೀಸಾ ಅವಧಿ ಮುಕ್ತಾಯವಾಗುವ ಎರಡು ವಾರಗಳ ಮುಂಚಿತವಾಗಿಯೇ ದೇಶವನ್ನು ಬಿಡುವಂತೆ ಸೌದಿ ಜವಾಝತ್ ತಿಳಿಸಿದೆ.

“ನೀವು ವೀಸಾ ಅವಧಿ ಇನ್ನೂ ಹೊಂದಿದ್ದರೂ ಎರಡು ವಾರಗಳೊಳಗೆ ಇಲ್ಲಿಂದ ಹೊರಡಬೇಕು, ಇಲ್ಲದಿದ್ದರೆ ನೀವು ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ” ಎಂದು ಸೌದಿ ಜವಾಝತ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

ಆದರೆ, ಕೌಟುಂಬಿಕ ವೀಸಾ (ಫ್ಯಾಮಿಲಿ ವೀಸಾ)ದಲ್ಲಿ ತೆರಳಿರುವ ಅನಿವಾಸಿ ನಾಗರಿಕರಿಗೆ ಎರಡು ವಾರಗಳ ಕಾಲ ವೀಸಾ ಅವಧಿ ವಿಸ್ತರಿಸಲು ಅವಕಾಶವನ್ನು ನೀಡಿದೆ. ಆದರೆ ಎರಡು ವಾರಗಳ ವಿಸ್ತರಿಸಿದ ಹೊರತಾಗಿಯೂ ವೀಸಾ ಅವಧಿ ಮುಗಿಯುವ ಮುನ್ನ (ಎರಡು ವಾರಗಳ ಮುಂಚಿತವಾಗಿ) ಸೌದಿ ಅರೇಬಿಯಾವನ್ನು ಬಿಟ್ಟು ತೆರಳುವಂತೆ ಸೂಚಿಸಿದೆ.

ಕೋವಿಡ್-19 ಸಂದಿಗ್ಧತೆಯಿಂದಾಗಿ ಸೌದಿ ಅರೇಬಿಯಾದಲ್ಲಿದ್ದು ವಾಪಾಸ್ ಸ್ವದೇಶಕ್ಕೆ ತೆರಳಲು ಸಾಧ್ಯವಾಗದಿರುವ ಅನಿವಾಸಿ ನಾಗರಿಕರು ತಮ್ಮ ವೀಸಾ ಅವಧಿಯನ್ನು ವಿಸ್ತರಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೌಟುಂಬಿಕ ವೀಸಾ ಅವಧಿಯನ್ನು ಎರಡು ವಾರಗಳ ಕಾಲ ವಿಸ್ತರಿಸುವ ಸೌದಿ ಅರೇಬಿಯಾ ಸರಕಾರವು ಈ ಮೂಲಕ ವಿನಾಯಿತಿಯನ್ನು ನೀಡಿದೆ.

ಕೌಟುಂಬಿಕ ವೀಸಾ ಅವಧಿ ಎರಡು ವಾರಗಳ ಕಾಲ ವಿಸ್ತರಿಸಿದ್ದರಿಂದ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ನೂರಾರು ಸಂಖ್ಯೆಯ ಅನಿವಾಸಿ ಭಾರತೀಯ ಕುಟುಂಬಗಳು ಈ ಪ್ರಯೋಜನವನ್ನು ಪಡೆಯಲಿದೆ.

- Advertisement -