ಸೌದಿ ಅರೇಬಿಯಾ: ಭೀಕರ ಅಪಘಾತ ಸಂಭವಿಸಿ ಕೇರಳ ಮೂಲದ ಇಬ್ಬರು ನರ್ಸ್ಗಳು ಸಾವನ್ನಪ್ಪಿದ ದಾರುಣ ಘಟನೆ ಸೌದಿ ಅರೇಬಿಯಾದ ತಾಯಿಫ್ನಲ್ಲಿ ನಡೆದಿದೆ. ಕೇರಳದ ವೈಕೊಮ್ ವಂಚಿಯೂರ್ ನಿವಾಸಿ ಅಖಿಲಾ (29) ಮತ್ತು ಕೊಲ್ಲಂ ನಿವಾಸಿ ಸುಬಿ (33) ಮೃತ ನರ್ಸ್ ಗಳು.
ಸಹೋದ್ಯೋಗಿಗಳಾದ ಆಯನ್ಸಿ ಮತ್ತು ಪ್ರಿಯಾಂಕಾ ಗಂಭೀರವಾಗಿ ಗಾಯಗೊಂಡಿದ್ದು, ಇದೀಗ ತಾಯಿಫ್ನ ಕಿಂಗ್ ಫೈಸಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಿನಿಬಸ್ನಲ್ಲಿ ರಿಯಾದ್ನಿಂದ ಜೆದ್ದಾಗೆ ಕ್ವಾರಂಟೈನ್ ಪೂರ್ಣಗೊಳಿಸಿ ಪ್ರಯಾಣಿಸುತ್ತಿದ್ದಾಗ ದಾರಿ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.