ರಸ್ತೆ ಅಪಘಾತ । ಮೈಸೂರು ಮೂಲದ CRPF ಯೋಧ ಸಾವು
Prasthutha: March 1, 2021

ಅಸ್ಸಾಂ : ಹೈವೇ ಪೆಟ್ರೋಲಿಂಗ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೈಸೂರು ಮೂಲದ CRPF ಪೇದೆ ಮೋಹನ್ (34) ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೋಹನ್ ನರಸೀಪುರ ತಾಲೂಕಿನ ಮುಡುಕುತೊರೆ ಬೆಟ್ಟಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ.
ಸೇನೆಯಲ್ಲಿ ಹತ್ತು ವರ್ಷ ಪೂರೈಸಿದ ಮೋಹನ್ ಇತ್ತೀಚೆಗೆ ಹೈವೇ ಪೆಟ್ರೋಲಿಂಗ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮೋಹನ್ ಅವರು ರಸ್ತೆ ದಾಟುವಾಗ ಬೈಕೊಂದು ಡಿಕ್ಕಿ ಹೊಡೆದಿದೆ ಮತ್ತು ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಸ್ಸಾಂನಲ್ಲಿ ಅಪಘಾತದಲ್ಲಿ ಮೃತಪಟ್ಟ ಮೋಹನ್ ಅವರ ಮೃತದೇಹ ರಾಜ್ಯಕ್ಕೆ ಮರಳಲಿದ್ದು ಪೋಷಕರು ಮತ್ತು ಕುಟುಂಬಿಕರು ಮೃತದೇಹದ ನಿರೀಕ್ಷೆಯಲ್ಲಿದ್ದಾರೆ.
