ಕೊಲಿಜಿಯಂ ಪರ ಸೋನಿಯಾ ಹೇಳಿಕೆ: ರಾಜ್ಯಸಭೆಯಲ್ಲಿ ತೀವ್ರ ಚರ್ಚೆ

Prasthutha|

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಯವರು ನಿನ್ನೆ ನೀಡಿದ್ದ “ನ್ಯಾಯಾಂಗವನ್ನು ಅಪ್ರಾತಿನಿಧಿಕವಾಗಿಸುವ ಪ್ರಯತ್ನ ನಡೆಯುತ್ತಿದೆ” ಎಂಬ ಹೇಳಿಕೆ ಶುಕ್ರವಾರ ರಾಜ್ಯಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾಯಿತು.

- Advertisement -

ಕೊಲಿಜಿಯಂ ಗೆ ಕೈ ಹಾಕುವುದೆಂದರೆ ನ್ಯಾಯಾಂಗದ ಸ್ವಾತಂತ್ರ್ಯಹರಣ ಎಂದು ಸೋನಿಯಾ ಗಾಂಧಿ ನಿನ್ನೆ ಹೇಳಿಕೆ ನೀಡಿದ್ದರು.

 ಅದನ್ನು ಸಭಾಪತಿ ಸ್ಥಾನದಲ್ಲಿದ್ದ ಉಪ ರಾಷ್ಟ್ರಪತಿ ಜಗದೀಪ್ ದನ್ಕರ್ ಅವರು ಇದು ನನ್ನ ಪ್ರಮಾಣವಚನವನ್ನು ಮತ್ತು ನನ್ನ ಪ್ರಾತಿನಿಧ್ಯವನ್ನು ಅಲ್ಲಗಳೆಯುವ ಪ್ರಯತ್ನ ಎಂದು ಟೀಕಿಸಿದರು.

- Advertisement -

ಅದನ್ನು ಕಡತದಿಂದ ತೆಗೆಯುವಂತೆ ಹಿರಿಯ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಆಗ್ರಹಿಸಿದರು. ಅದಕ್ಕೆ ಧ್ವನಿಗೂಡಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಂಸತ್ತಿನ ಹೊರಗೆ ಸೋನಿಯಾ ಗಾಂಧಿಯವರು ಮಾತನಾಡಿದ್ದರ ಚರ್ಚೆ ಇಲ್ಲಿ ಅಪ್ರಸ್ತುತ ಎಂದರು.

ಜಗದೀಪ್ ದನ್’ಕರ್ ಅವರು ದೇಶದ ಉಪರಾಷ್ಟ್ರಪತಿ, ಸಂಸತ್ತಿನ ಎರಡೂ ಮನೆಗಳ ಸದಸ್ಯರಿಂದ ಆಯ್ಕೆಯಾದವರು. ಅವರ ಮಾತಿಗೆ ತಡೆ ಹೇಗೆ ಎಂದು ಬಿಜೆಪಿಯ ರಾಜ್ಯ ಸಭಾ ನಾಯಕ ಪಿಯೂಸ್ ಗೋಯೆಲ್ ಹೇಳಿದರು. ಅದನ್ನು ಬಿಜೆಪಿಯ ಹಲವರು ಬೆಂಬಲಿಸಿದರು.

“ನಾನು ಡಿಸೆಂಬರ್ 8ರಂದು ಈ ಸಭಾಪತಿ ಕುರ್ಚಿಯಲ್ಲಿ ಕುಳಿತು ಏನು ಹೇಳಿದ್ದೆನೋ ಅದು ಆಳುವ ಪಕ್ಷವನ್ನು ನ್ಯಾಯಾಂಗದ ವಿಷಯದಲ್ಲಿ ಅಪ್ರಾತಿನಿಧ್ಯದ್ದಾಗಿ ಮಾಡಬಾರದು ಎನ್ನುವುದಾಗಿತ್ತು. ಸೋನಿಯಾ ಗಾಂಧಿಯವರು ನ್ಯಾಯಾಂಗವನ್ನು ಅಪ್ರಾತಿನಿಧ್ಯವನ್ನಾಗಿ ಮಾಡಲಿದೆ ಎನ್ನುವುದು ಸಂಸತ್ತಿಗೆ ನ್ಯಾಯಾಂಗದಲ್ಲಿ ಅಧಿಕಾರ ಇಲ್ಲದಿರುವುದು ಅಪ್ರಾತಿನಿಧ್ಯ ಮಾಡುವುದಲ್ಲವೆ”? ಎಂದು ದನ್ಕರ್ ಪ್ರಶ್ನಿಸಿದರು.

 ಕೊಲಿಜಿಯಂ ಗೆ ಕೈ ಹಾಕುವುದೆಂದರೆ ನ್ಯಾಯಾಂಗದ ಸ್ವಾತಂತ್ರ್ಯಹರಣ ಎಂದು ಸೋನಿಯಾ ಗಾಂಧಿ ಹೇಳಿದ್ದರು.



Join Whatsapp