IPLನಲ್ಲಿ ಹೊಸ ದಾಖಲೆ ಬರೆದ ಸ್ಯಾಮ್ ಕರ್ರನ್! ಅತಿಹೆಚ್ಚು ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಪಾಲಾದ ಇಂಗ್ಲೆಂಡ್ ಆಲ್ ರೌಂಡರ್

Prasthutha|

ಕೊಚ್ಚಿ: ಇಂಗ್ಲೆಂಡ್’ನ ಸ್ಟಾರ್ ಆಲ್ ರೌಂಡರ್ ಸ್ಯಾನ್ ಕರ್ರನ್, ಬರೋಬ್ಬರಿ 18.50 ಕೋಟಿ ಮೊತ್ತಕ್ಕೆ ಮಾರಾಟವಾಗುವ ಮೂಲಕ ಐಪಿಎಲ್’ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.

- Advertisement -


ಕೊಚ್ಚಿಯಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್, ಐಪಿಎಲ್’ನ ಮಿನಿ ಹರಾಜಿನಲ್ಲಿ ದಾಖಲೆಯ 18.50 ಮೊತ್ತಕ್ಕೆ ಸ್ಯಾಮ್, ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.
ಇದುವರೆಗೆ, ಐಪಿಎಲ್ ಮಿನಿ ಹರಾಜಿನಲ್ಲಿ ಅತಿಹೆಚ್ಚು ಮೊತ್ತ ಪಡೆದ ದಾಖಲೆ ದಕ್ಷಿಣ ಆಫ್ರಿಕಾದ ಆಲ್’ರೌಂಡರ್ ಕ್ರಿಸ್ ಮಾರಿಸ್ ಹೆಸರಿನಲ್ಲಿದೆ. 2021ರಲ್ಲಿ ನಡೆದಿದ್ದ ಮಿನಿ ಹರಾಜಿನಲ್ಲಿ ರಾಜಸ್ತಾನ ರಾಯಲ್ಸ್ ತಂಡ ಅವರನ್ನು 16.25 ಕೋಟಿ ರೂ. ನೀಡಿ ಖರೀದಿಸಿತ್ತು.


ಶುಕ್ರವಾರದ ಹರಾಜಿನಲ್ಲಿ ಇಂಗ್ಲೆಂಡ್’ನ ಬ್ಯಾಟ್ಸ್’ಮನ್ ಹ್ಯಾರಿ ಬ್ರೂಕ್ ಅವರಿಗೂ ಬಂಪರ್ ಮೊತ್ತ ಲಭಿಸಿದೆ.

- Advertisement -


1.50 ಕೋಟಿ ಮೂಲಬೆಲೆ ಹೊಂದಿದ್ದ ಬ್ರೂಕ್’ರನ್ನು ಸನ್ ರೈಸರ್ಸ್ ಹೈದರಾಬಾದ್, ಬರೋಬ್ಬರಿ 13.25 ಕೋಟಿ ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. ರಾಜಸ್ಥಾನ ರಾಯಲ್ಸ್ ತನ್ನ ಪರ್ಸ್’ನಲ್ಲಿರುವ ಪೂರ್ತಿ ಮೊತ್ತವನ್ನು [13.20 ಕೋಟಿ] ವ್ಯಯಿಸಿ ಬ್ರೂಕ್’ ರನ್ನು ಖರೀದಿಸಲು ಪ್ರಯತ್ನ ನಡೆಸಿತು. ಆದರೆ ಸನ್ ರೈಸರ್ಸ್ ಫ್ರಾಂಚೈಸಿ ಅದಕ್ಕೆ ಅವಕಾಶ ನೀಡಲಿಲ್ಲ.
ಇನ್ನು, ಪಂಜಾಬ್ ಕಿಂಗ್ಸ್ ತಂಡದಿಂದ ಬಿಡುಗಡೆಯಾಗಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್, 8.25 ಕೋಟಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಕೂಡಿಕೊಂಡಿದ್ದಾರೆ.

Join Whatsapp