ಸೋಮೇಶ್ವರ ಪುರಸಭೆ ಫಲಿತಾಂಶ: ಪತ್ನಿಗೆ ಗೆಲುವು, ಒಂದು ಮತದಿಂದ ಸೋತ ಪತಿ!

Prasthutha|

ತಂಗಿ ವಿರುದ್ಧ ಅಕ್ಕ ಸೋಲು

- Advertisement -

ಮಂಗಳೂರು: ಸೋಮೇಶ್ವರ ಪುರಸಭೆಯಾಗಿ ಮೇಲ್ದರ್ಜೆಗೇರಿದ ಬಳಿಕ ಇದೆ ಮೊದಲ ಬಾರಿಗೆ ಚುನಾವಣೆ ನಡೆದಿದೆ. ಇಂದು ಫಲಿತಾಂಶ ಪ್ರಕಟವಾಗಿದ್ದು, ಈ ಚುನಾವಣೆಯಲ್ಲಿ ಎರಡು ಅಚ್ಚರಿಯ ಸಂಗತಿ ನಡೆದಿವೆ.

3ನೇ ವಾರ್ಡ್ ಲಕ್ಷ್ಮಿಗುಡ್ಡೆ ಪ್ರಕಾಶ್ ನಗರದಲ್ಲಿ ಸಹೋದರಿಯರ ನಡುವೆ ನಡೆದ ಸ್ಪರ್ಧೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತಂಗಿ ವಿಜಯಿಯಾದರೆ ಕಾಂಗ್ರೆಸ್ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಸಿಪಿಐಎಂ ಅಭ್ಯರ್ಥಿ ಅಕ್ಕನಿಗೆ ಸೋಲಾಗಿದೆ. ಬಿಜೆಪಿಯ ಸಪ್ನ ಶೆಟ್ಟಿ 340 ಮತಗಳನ್ನು ಪಡೆದು ವಿಜಯಿಯಾದರೆ ಅವರ ಸಹೋದರಿ ಸಿಪಿಐಎಂ ಅಭ್ಯರ್ಥಿ ಸೌಮ್ಯಾ ಎಸ್. ಪಿಲಾರ್ 153 ಮತಗಳನ್ನು ಪಡೆದು 183 ಮತಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ.

- Advertisement -

ದಂಪತಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಎರಡು ವಾರ್ಡ್ ಗಳಲ್ಲಿ ಸ್ಪರ್ಧಿಸಿದ್ದರು. ಇದೀಗ ಹೊರಬಿದ್ದ ಫಲಿತಾಂಶದಲ್ಲಿ ಒಂದು ವಾರ್ಡ್ ನಲ್ಲಿ ಪತ್ನಿ ಗೆಲುವು ಸಾಧಿಸಿದ್ದರೇ, ಮತ್ತೊಂದು ವಾರ್ಡ್ ನಲ್ಲಿ ಪತಿ ಸೋತಿದ್ದಾರೆ. ಪತ್ನಿ ಅಮೀನಾ ಬಶೀರ್ ವಿಜಯಪತಾಕೆ ಹಾರಿಸಿದರೇ, ಪತಿ ಬಶೀರ್ ಮುಂಡೋಳಿ ಒಂದು ಮತದ ಅಂತರದಿಂದ ಸೋತಿದ್ದಾರೆ. ಪುರಸಭೆಯ ಎಲ್ಲಾ 23 ಸ್ಥಾನಗಳಿಗೆ ಸ್ಪರ್ಧಿಸಿದ್ದ ಬಿಜೆಪಿಯ 16 ಅಭ್ಯರ್ಥಿಗಳು ಜಯಗಳಿಸಿದ್ದು, 22 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ನ ಏಳು ಅರ್ಭ್ಯರ್ಥಿಗಳು ವಿಜಯಶಾಲಿಯಾಗಿದ್ದಾರೆ.

Join Whatsapp