ಚೆಕ್ ಬೌನ್ಸ್ ಪ್ರಕರಣ ಹಳೆಯದು, ಇತ್ಯರ್ಥ ಆಗಲಿದೆ: ಮಧು ಬಂಗಾರಪ್ಪ

Prasthutha|

ಹುಬ್ಬಳ್ಳಿ: ಮಾಧ್ಯಮದವರು ಚೆಕ್ ಬೌನ್ಸ್ ಎಂದು ಹಾಕಿದ್ದೀರಿ, ಆದರೆ ಅದು ಚೆಕ್ ಬೌನ್ಸ್ ಅಲ್ಲ. ನಾವೇ ಹಣ ಪಾವತಿಸುವುದಾಗಿ ಸೆಟ್ಲ್ಮೆಂಟ್ ಮಾಡಿಕೊಂಡಿದ್ದೇವೆ. ಅದನ್ನು ಕೋರ್ಟ್ ಕೂಡ ಮನ್ನಣೆ ಮಾಡಿದೆ. ಹಣ ಕಟ್ಟದಿದ್ದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಹೇಳಿದರೆ ತಪ್ಪಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು 10 ವರ್ಷಗಳ ಹಿಂದಿನ ಪ್ರಕರಣ. ಆಗ ಕೆಲವೊಂದು ವಿಚಾರಗಳು ಇತ್ತು. ಅದನ್ನು ಈಗ ಹೇಳುವ ಅವಶ್ಯಕತೆ ಇಲ್ಲ. ಜೊತೆಗೆ ಇದು ನನ್ನ ವೈಯಕ್ತಿಕ ಅಲ್ಲ. ಅದು ಕಂಪೆನಿಗೆ ಸಂಬಂಧಿಸಿದ್ದು, ಅದರಲ್ಲಿ ನಾನೊಬ್ಬನೇ ಅಲ್ಲ, ಸುಮಾರು ಜನ ಇದ್ದಾರೆ. ಇದು ಹಳೆಯ ಪ್ರಕರಣವಾಗಿದ್ದು, ಮಾಧ್ಯಮದವರು ನೋಡಿ ಹಾಕಿ ಎಂದು ಮನವಿ ಮಾಡಿದರು.

Join Whatsapp