ಮಗಳ ಅಶ್ಲೀಲ ವೀಡಿಯೋ ಪೋಸ್ಟ್ ಮಾಡಿದಾತನನ್ನು ಪ್ರಶ್ನಿಸಲು ಹೋದ  ಯೋಧನ ಹತ್ಯೆ

Prasthutha|

ಗಾಂಧಿನಗರ: ತನ್ನ ಮಗಳ ಅಶ್ಲೀಲ ವೀಡಿಯೋವನ್ನು ಪ್ರಸಾರ ಮಾಡಿದ್ದನ್ನು ಪ್ರಶ್ನಿಸಲು ಹೋದ ಗಡಿ ಭದ್ರತಾ ಪಡೆ (ಬಿಎಸ್‌ಎಫ್)  ಯೋಧನನ್ನು ಥಳಿಸಿ ಕೊಂದ ಘಟನೆ ಗುಜರಾತ್ ನ ನಾಡಿಯಾಡ್ ನಲ್ಲಿ ನಡೆದಿದೆ.

- Advertisement -

ತನ್ನ ಮಗಳ ಅಶ್ಲೀಲ ವಿಡಿಯೋವನ್ನು 15 ವರ್ಷದ ಬಾಲಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ. ಈ ಹಿನ್ನೆಲೆಯಲ್ಲಿ ವಿಚಾರಿಸಲು ಹೋದ ಮೇಲಾಜಿ ವಘೇಲಾ ಎಂಬ ಯೋಧನ ಮೇಲೆ ಬಾಲಕನ ಮನೆಯವರು ಹಲ್ಲೆ ನಡೆಸಿದ್ದು, ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕ ಹಾಗೂ ಬಾಲಕಿ ಒಂದೇ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಇಬ್ಬರ ನಡುವೆಯೂ ಆಪ್ತ ಗೆಳೆತನ ಇತ್ತು. ಇತ್ತೀಚೆಗೆ ಬಾಲಕ ಸಾಮಾಜಿಕ ಜಾಲತಾಣದಲ್ಲಿ ಈ ಬಾಲಕಿಯ ಅಶ್ಲೀಲ ವಿಡಿಯೋವನ್ನು ಪೋಸ್ಟ್ ಮಾಡಿದ್ದ. ಇದನ್ನು ಪ್ರಶ್ನಿಸಲು ಯೋಧ ತನ್ನ ಪತ್ನಿ, ಇಬ್ಬರು ಪುತ್ರರು ಮತ್ತು ಸೋದರಳಿಯನೊಂದಿಗೆ ಬಾಲಕನ ಮನೆಗೆ ಹೋಗಿದ್ದರು. ಆದರೆ ಬಾಲಕನ ಕುಟುಂಬದ ಸದಸ್ಯರು ಅವರನ್ನು ನಿಂದಿಸಲು ಪ್ರಾರಂಭಿಸಿದರು. ಅವರು ಅದನ್ನು ವಿರೋಧಿಸಿದಾಗ, ಬಾಲಕನ ಕುಟುಂಬಸ್ಥರು ಯೋಧನ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಎಲ್ಲಾ ಏಳು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp