ಸಮಾಜ ಸೇವಕ ಡಾ| ಅಬ್ದುಲ್ ಶಕೀಲ್’ಗೆ ಏಷ್ಯಾ ಅಚೀವರ್ಸ್ ಅವಾರ್ಡ್ ಪ್ರದಾನ

Prasthutha|

ಮುಂಬಯಿ: ಭಾರತೀಯ ಕೌನಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಹಾಗೂ ಸ್ವಾಮಿ ವಿವೇಕಾನಂದ ಕಲ್ಚರಲ್ ಸೆಂಟರ್ ಕೊಲಂಬೊ ಮತ್ತು ಹೈ ಕಮಿಷನ್ ಆಫ್ ಇಂಡಿಯಾ ಜಂಟಿ ಆಶ್ರಯದಲ್ಲಿ ಶ್ರೀಲಂಕಾದ ಯುನಿವರ್ಸಿಟಿ ಆಫ್ ವಿಶುವಲ್ ಆ್ಯಂಡ್ ಫರ್ಪಾಮಿಂಗ್ ಆರ್ಟ್ಸ್ ಸಭಾಂಗಣದಲ್ಲಿ ಅಯೋಜಿಸಿದ 40ನೇ ಅಂತಾರಾಷ್ಟ್ರೀಯ ಸಾಂಸ್ಕ್ರತಿಕ ಸಮ್ಮೇಳನದಲ್ಲಿ ಶ್ರೀಲಂಕಾ ಸರಕಾರದ ಧಾರ್ಮಿಕ ಮತ್ತು ಸಾಂಸ್ಕ್ರತಿಕ ವ್ಯವಹಾರಗಳ ಸಚಿವ ವಿದುರ ವಿಕ್ರೆಮನಾಯಕೆ ಹಾಗೂ ಶ್ರೀ ಲಂಕಾ ಸರಕಾರದ ಉನ್ನತ ಶಿಕ್ಷಣ ಸಚಿವ ಸುರೆನಾ ರಾಘವನ್ ಸಮಾಜ ಸೇವಕ ಡಾ.ಅಬ್ದುಲ್ ಶಕೀಲ್ ರವರಿಗೆ ಏಷ್ಯಾ ಅಚೀವರ್ಸ್ ಅವಾರ್ಡ್ ಪ್ರದಾನ ಮಾಡಲಾಯಿತು.

- Advertisement -

ಕೋವಿಡ್ ಸಂದರ್ಭ ಜಾತಿ, ಮತ ಭೇದ ಮರೆತು ಹತ್ತು ಸಾವಿರಕ್ಕೂ ಅಧಿಕ ಅರ್ಹ ಕುಟುಂಬಗಳಿಗೆ ಅಕ್ಕಿ ವಿತರಣೆ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ದತ್ತು ಸ್ವೀಕಾರ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಹಿತ ಅನೇಕ ಸಮಾಜ ಸೇವೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ.

ಈ ಸಂದರ್ಭ ಕೊಲಂಬೊ ಸ್ವಾಮಿ ವಿವೇಕಾನಂದ ಕಲ್ಚರಲ್ ಸೆಂಟರ್ ನ ನಿರ್ದೇಶಕ ಪ್ರೋ. ಅನುಕುರನ್ ದಟ್ಟ, ಎಷ್ಯ ಮೀಡಿಯಾ ಕಲ್ಚರಲ್ ಎಸೋಶಿಯೆಸನ್ ನ ಮದನ್ ಗೌಡ, ಸ್ಪಂದನ ಇಡ ಇಂಟರ್ನಾ್ಯಷನಲ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಡಾ. ಇಡ ಸಮುಯಿಲ್ ರೆಡ್ಡಿ ಉಪಸ್ಥಿತರಿದ್ದರು.