ಭಾರತಕ್ಕೆ ಗೌರವ ತರುವ ಕೆಲಸವನ್ನ ಕರ್ನಾಟಕದಿಂದ ಇಸ್ರೋ ಮಾಡುತ್ತಿದೆ: ಡಿಕೆಶಿ

Prasthutha|

ಬೆಂಗಳೂರು: ಭಾರತಕ್ಕೆ ಗೌರವ ತರುವ ಕೆಲಸವನ್ನ ಕರ್ನಾಟಕದಿಂದ ಇಸ್ರೋ ಮಾಡುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

- Advertisement -


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ರೋ ವಿಜ್ಞಾನಿಗಳು ಸಾಹಸ, ಪ್ರಯೋಗ ಎಲ್ಲ ಮಾಡುತ್ತಿದ್ದಾರೆ. ಇಸ್ರೋ ಕೈಗೊಂಡಿರುವ ಸೂರ್ಯಯಾನಕ್ಕೆ ಶುಭಕೋರುತ್ತೇನೆ. ಯಶಸ್ವಿಯಾಗಲಿ, ದೇಶದ ಜನ ಪ್ರಾರ್ಥನೆ ಮಾಡುತ್ತಿದ್ದಾರೆ. ಇಡೀ ವಿಶ್ವದಲ್ಲೇ ಇಸ್ರೋ ಶ್ರಮದ ಬಗ್ಗೆ ಮಾತಾಡುತ್ತಿದ್ದಾರೆ ಎಂದು ತಿಳಿಸಿದರು.