ರಸ್ತೆ ಅಪಘಾತ: ನಟಿ, ಸೋಷಿಯಲ್ ಮೀಡಿಯಾ ಸ್ಟಾರ್ ಗಾಯತ್ರಿ ಮೃತ್ಯು!

Prasthutha|

ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ಸೋಶಿಯಲ್ ಮೀಡಿಯಾ ಸ್ಟಾರ್, ಹಾಗೂ ತೆಲುಗು ನಟಿ ಗಾಯತ್ರಿ ಅಲಿಯಾಸ್ ಡಾಲಿ ಡಿಕ್ರೂಜ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

- Advertisement -

ಕಾರು ಅತಿ  ವೇಗದಲ್ಲಿ ಬಂದ ಕಾರಣವೇ ಈ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ತಿಳಿಸಿದ್ದಾರೆ.

ಈ ಅಪಘಾತದಲ್ಲಿ ಗಾಯತ್ರಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. 

- Advertisement -

ಗಾಯಿತ್ರಿ ಅವರು ಹಲವು ಕಿರುಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ‘ಮೇಡಂ ಸರ್ ಮೇಡಂ ಅಂಥೆ’ ವೆಬ್ ಸರಣಿಯಲ್ಲಿಯೂ ಅಭಿನಯಿಸಿದ್ದರು. ಮಾರ್ಚ್ 18 ರ ರಾತ್ರಿ ಹೋಳಿ ಆಚರಣೆ ಮುಗಿಸಿ ಗೆಳೆಯ ರಾಥೋಡ್ ಜೊತೆ ತಮ್ಮ ಮನೆಗೆ ವಾಪಸಾಗುತ್ತಿದ್ದರು, ಈ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಗುದ್ದಿದೆ.

ಅಪಘಾತದ ಸ್ಥಳದಲ್ಲೆ ನಟಿ ಮೃತಪಟ್ಟಿದ್ದಾರೆ, ಆಕೆಯ ಸ್ನೇಹಿತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಬದುಕುಳಿಯಲಿಲ್ಲ, ಇನ್ನೂ ದುರಂತದಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆ ಅಪಘಾತಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp