ನಿಷೇಧಿತ ತಂಬಾಕುಗಳ ಜಾಹೀರಾತಿಗೆ ಸಾಮಾಜಿಕ ಜಾಲತಾಣವೇ ವೇದಿಕೆ: ಸಮೀಕ್ಷೆ

Prasthutha|

- Advertisement -

►ಕರ್ನಾಟಕದಲ್ಲೇ ನಿಷೇಧಿತ ತಂಬಾಕು ಹೆಚ್ಚು ಬಳಕೆ

ಬೆಂಗಳೂರು: ತಂಬಾಕು ಸೇವನೆ ಹಾಗೂ ಜಾಹೀರಾತಿಗೆ ಕಡಿವಾಣವಿದ್ದರೂ ಸಾಮಾಜಿಕ ಜಾಲತಾಣದಲ್ಲಿ ತಂಬಾಕು ಸೇವನೆ ಹಾಗೂ ಮಾರಾಟದ ಬಗ್ಗೆ ರಾಜಾರೋಷವಾಗಿ ಜಾಹೀರಾತು ನೀಡಲಾಗುತ್ತಿದೆ ಎಂದು ನ್ಯಾಷನಲ್ ಲಾ ಸ್ಕೂಲ್ ಹಾಗೂ ಕನ್ಸೂಮರ್ ಲಾ ಆಂಡ್ ಪ್ರಾಕ್ಟೀಸಸ್ ಸಹಯೋಹದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

- Advertisement -

2019ರಲ್ಲಿ ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವೆರಿ ಸಿಸ್ಟಮ್ಸ್ (ಇಎನ್ ಡಿಎಸ್) ಮತ್ತು ಹೀಟೆಡ್ ತಂಬಾಕು ಪದಾರ್ಥ ಇವುಗಳ ಮೇಲೆ ಕೇಂದ್ರ ಸರ್ಕಾರ ಕಾನೂನಾತ್ಮಕವಾಗಿ ನಿಷೇಧ ಹೇರಿದೆ. ಈ ಬಗ್ಗೆ ಎಲ್ಲಿಯೂ ಜಾಹೀರಾತು ನೀಡುವಂತಿಲ್ಲ. ಆದರೆ, ಸಾಮಾಜಿಕ ಜಾಲತಾಣವಾದ ಫೇಸ್ ಬುಕ್, ಟ್ವಿಟ್ಟರ್, ಇನ್ಸ ಸ್ಟಾಗ್ರಾಂ, ಟೆಲಿಗ್ರಾಂಗಳಲ್ಲಿ ಜಾಹೀರಾತು ನೀಡಲಾಗುತ್ತಿದೆ ಎನ್ನುವುದು ಸಮೀಕ್ಷೆ ಮೂಲಕ ಕಂಡು ಬಂದಿದೆ.

ನ್ಯಾಷನಲ್ ಲಾ ಸ್ಕೂಲ್ ಇಂಡಿಯಾ ಆನ್ ಲೈನ್ ಮೂಲಕ ಈ ಸಮೀಕ್ಷೆ ನಡೆಸಲಾಗಿದೆ. ಒಟ್ಟು 23  ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು, ವಿದ್ಯಾರ್ಥಿಗಳ ಬಾರ್ ಅಸೋಸಿಯೇಷನ್ನ ಒಟ್ಟು 4,049 ವಿದ್ಯಾರ್ಥಿಗಳನ್ನು ಈ ಸಮೀಕ್ಷೆಯಲ್ಲಿ ಒಳಪಡಿಸಲಾಗಿತ್ತು. ಶೇ.46ರಷ್ಟು ಪುರುಷರು ಹಾಗೂ ಶೇ.51ರಷ್ಟು ಮಹಿಳೆಯರು ಈ ಅಧ್ಯಯನದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸಮೀಕ್ಷೆ ಪ್ರಕಾರ ಶೇ.38.1ರಷ್ಟು ಕರ್ನಾಟಕದಲ್ಲಿ ನಿಷೇಧಿತ ತಂಬಾಕು ಸೇವನೆ ಮಾರಾಟದಲ್ಲಿದ್ದು, ಕರ್ನಾಟಕವೇ ಮುಂಚೂಣಿ ರಾಜ್ಯವಾಗಿದೆ. ಮಹಾರಾಷ್ಟ್ರ ಶೇ.12.4, ತಮಿಳುನಾಡು ಶೇ.9.3, ಉತ್ತರ ಪ್ರದೇಶ ಶೇ.6.7 ಹಾಗೂ ಕೇರಳ ಶೇ.6.5 ರಷ್ಟು ಪ್ರಮಾಣದಲ್ಲಿ ಚಾಲ್ತಿಯಲ್ಲಿವೆ.

ಅಧ್ಯಯನದ ಕುರಿತು ಮಾತನಾಡಿದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದ ಪ್ರೊ. ಅಶೋಕ್ ಪಾಟೀಲ್, ಭಾರತದಲ್ಲಿ ಇ-ಸಿಗರೇಟುಗಳನ್ನು ಎಲೆಕ್ಟ್ರಾನಿಕ್ ಪ್ಲಾಟ್ ಫಾರಂಗಳ ಮೂಲಕ ಹೆಚ್ಚಿನ ಜಾಹೀರಾತಿಗೆ ಅವಕಾಶ ಸಿಕ್ಕಿದೆ. ನಿಷೇಧಿತ ಇ-ಸಿಗರೇಟು ಹೆಚ್ಚಾಗಿ ಟೆಲಿಗ್ರಾಂನಲ್ಲಿ ಜಾಹೀರಾತು ನೀಡಲಾಗುತ್ತಿದೆ ಎಂದು ಶೇ.60ರಷ್ಟು ಮಂದಿ ಹೇಳಿದ್ದಾರೆ. ಉಳಿದಂತೆ ವಾಟ್ಸ್ ಆಪ್ ನಲ್ಲಿ ಶೇ.22.6, ಫೇಸ್ ಬುಕ್ ನಲ್ಲಿ ಶೇ.17.3, ಟಿಕ್ ಟಾಕ್ ನಲ್ಲಿ ಶೇ.14.3 ಹಾಗೂ ಟ್ವಿಟರ್ನಲ್ಲಿ ಶೇ.6.8 ರಷ್ಟು ಜಾಹೀರಾತು ಕಂಡಿರುವುದಾಗಿ ಸಮೀಕ್ಷೆಗೆ ಒಳಪಟ್ಟವರು ಅಭಿಪ್ರಾಯ ಪಟ್ಟಿದ್ದಾರೆ ಎಂದರು.

ಸರ್ಕಾರವೂ ನಿಷೇಧದ ಬಳಿಕ ಯುವ ಜನತೆಯನ್ನು ದಾರಿ ತಪ್ಪಿಸಲು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ನೀಡುವವರ ವಿರುದ್ಧ ಹದ್ದಿನ ಕಣ್ಣಿಟ್ಟು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Join Whatsapp