ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಪ್ರತಿನಿಧಿಗಳ ಸಭೆ

Prasthutha|

ಉಳ್ಳಾಲ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು(ಉಳ್ಳಾಲ) ವಿಧಾನಸಭಾ ಕ್ಷೇತ್ರ ಸಮಿತಿಯ 2021 – 2024 ಸಾಲಿನ ಮಧ್ಯಂತರ ಕ್ಷೇತ್ರ ಪ್ರತಿನಿಧಿಗಳ ಸಭೆಯು ಕ್ಷೇತ್ರಾಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ಇವರ ಅಧ್ಯಕ್ಷತೆಯಲ್ಲಿ ಕಲ್ಲಾಪು ಯುನಿಟಿ ಹಾಲ್ ನಲ್ಲಿ ನಡೆಯಿತು.

- Advertisement -

SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಶ್ರಫ್ ಅಡ್ಡೂರು ಮತ್ತು ಜಮಾಲ್ ಜೋಕಟ್ಟೆ ರವರು ಮಧ್ಯಂತರ ಕ್ಷೇತ್ರ ಪ್ರತಿನಿಧಿ ಸಭೆಯನ್ನು ಮುನ್ನಡೆಸಿ 2021 – 2023 ರ ಪಕ್ಷದ ಬಲವರ್ಧನೆ, ಕ್ಷೇತ್ರ ವ್ಯಾಪ್ತಿಯ ಪಕ್ಷದ ಚಟುವಟಿಕೆಯ ಬಗ್ಗೆ ಪ್ರತಿನಿಧಿಗಳ ಮುಂದಿಟ್ಟು ಕಳೆದ 23 ತಿಂಗಳ ಪಕ್ಷದ ಕಾರ್ಯಚಟುವಟಿಕೆಯ ಬಗ್ಗೆ ವಿವರಿಸಿ, ವರದಿ ಮಂಡಿಸಲಾಯಿತು. ನಂತರ

ಆಂತರಿಕ ಚುನಾವಣೆಯ ಮೂಲಕ ಕ್ಷೇತ್ರದ ತೆರವಾದ ಸ್ಥಾನಕ್ಕೆ ನಾಯಕರನ್ನು ಆಯ್ಕೆ ಮಾಡಲಾಯಿತು.

- Advertisement -

ಮುಂದಿನ ಅವಧಿಗೆ ಕ್ಷೇತ್ರದ ಅಧ್ಯಕ್ಷರಾಗಿ ಇರ್ಷಾದ್ ಅಜ್ಜಿನಡ್ಕ, ಉಪಾಧ್ಯಕ್ಷರಾಗಿ ರವಿ ಕುಟಿನ್ಹಾ , ಕಾರ್ಯದರ್ಶಿಗಳಾಗಿ  ಮುಹಮ್ಮದ್ ಝಾಹಿದ್ , ಅಶ್ರಫ್ ಮಂಚಿ, ಜೊತೆ ಕಾರ್ಯದರ್ಶಿಯಾಗಿ  ಉಬೈದ್ ಅಮ್ಮೆಂಬಳ ರವರನ್ನು ಮುಂದುವರಿಸಲಾಯಿತು.

ಉಳಿದ ಸ್ಥಾನಗಳಿಗೆ ಪಕ್ಷದ ಆಂತರಿಕ ಚುನಾವಣೆ ಮೂಲಕ ನೂತನ ಉಪಾಧ್ಯಕ್ಷರಾಗಿ ಫಾರೂಖ್ ಝಲ್ ಝಲ್ ,  ಕೋಶಾಧಿಕಾರಿಯಾಗಿ ರವೂಫ್ ಉಳ್ಳಾಲ್, ಜೊತೆ ಕಾರ್ಯದರ್ಶಿಯಾಗಿ S.M.ಬಶೀರ್ ಹರೇಕಳ, ರವರು ಆಯ್ಕೆಗೊಂಡರು ಸಮಿತಿಯ ಸದಸ್ಯರಾಗಿ ನವಾಝ್ ಉಳ್ಳಾಲ್, ರಿಝ್ವಾನ್ ಸಜಿಪ, ಮೊಯ್ದಿನ್ ಎಸ್. ಬಿ. ರವರು ಆಯ್ಕೆಗೊಂಡರು.

SDPI ದಕ್ಷಿಣ ಕನ್ನಡ ಜಿಲ್ಲಾ ಕೋಷಾಧಿಕಾರಿ ಹನೀಫ್ ಬೋಳಿಯರ್ ರವರು  ಸಭೆಯಲ್ಲಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ದ್ವಿತೀಯ ಅವಧಿಗೆ ಜಿಲ್ಲೆಯಲ್ಲಿ ಪಕ್ಷದಿಂದ ನೂತನವಾಗಿ ಆಯ್ಕೆಯಾದ  ಗ್ರಾಮ ಪಂಚಾಯತ್ ಅಧ್ಯಕ್ಷರು , ಉಪಾಧ್ಯಕ್ಷರುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು , ಅಡ್ಯಾರ್ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಯಾಸಿನ್ ಅರ್ಕುಳ, ತಲಪಾಡಿ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಇಸ್ಮಾಯಿಲ್ ತಲಪಾಡಿ ,  ಪಾವೂರು ಗ್ರಾಮಪಂಚಾಯತ್ ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡ ಮೆಹರುನ್ನೀಸಾ ಬಶೀರ್ ರವರನ್ನು ಈ ಸಂದರ್ಭದಲ್ಲಿ  ಸನ್ಮಾನಿಸಲಾಯಿತು.

 ಕಾರ್ಯಕ್ರಮದಲ್ಲಿ  ನೂತನವಾಗಿ ಆಯ್ಕೆಗೊಂಡ ಬ್ಲಾಕ್ ಪದಾಧಿಕಾರಿಗಳ  ಪದಗ್ರಹಣ ಕಾರ್ಯಕ್ರಮ ನಡೆಯಿತು , ಹೊಸ ಪದಾಧಿಕಾರಿಗಳಾಗಿ ಮಂಜನಾಡಿ ಬ್ಲಾಕ್ ಅಧ್ಯಕ್ಷರಾಗಿ ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯರಾದ ನೌಷಾದ್ ಕಲ್ಕಟ್ಟ , ಕಾರ್ಯದರ್ಶಿಯಾಗಿ ಇಮ್ತಿಯಾಝ್ ಕಿನ್ಯಾ, ಮುನ್ನೂರು ಬ್ಲಾಕ್ ಅಧ್ಯಕ್ಷರಾಗಿ ಕಮರುದ್ದೀನ್ ಮಲಾರ್ , ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಬೋಳಿಯಾರ್, ಕೊಣಾಜೆ ಬ್ಲಾಕ್ ಅಧ್ಯಕ್ಷರಾಗಿ ನವಾಝ್ ಸಜಿಪ, ಕಾರ್ಯದರ್ಶಿಯಾಗಿ ಫಜೀರು ಗ್ರಾಮ ಪಂಚಾಯತ್ ಸದಸ್ಯರಾದ ಶಫೀಕ್ ಅರ್ಕಾನ ರವರು ಆಯ್ಕೆಗೊಂಡಿದ್ದಾರೆ.

ಉಳ್ಳಾಲ ನಗರ ಸಮಿತಿ ಅಧ್ಯಕ್ಷರಾಗಿ ಅಬ್ಬಾಸ್ ಏ.ಆರ್, ಕಾರ್ಯದರ್ಶಿಯಾಗಿ ಜಮಾಲ್ ಉಳ್ಳಾಲ್ , ಕೋಟೆಕಾರ್ ಪಟ್ಟಣ ಸಮಿತಿಯ ನೂತನ ಅಧ್ಯಕ್ಷರಾಗಿ ಸಂಶುದ್ದೀನ್ ಅಜಿನಡ್ಕ,  ಕಾರ್ಯದರ್ಶಿಯಾಗಿ  ಬಶೀರ್ ಅಜಿನಡ್ಕ ರವರು ಆಯ್ಕೆಗೊಂಡಿರುತ್ತಾರೆ .

 ಕಾರ್ಯಕ್ರಮದಲ್ಲಿ ಕ್ಷೇತ್ರ ಜೊತೆ ಕಾರ್ಯದರ್ಶಿ ಉಬೈದ್ ಅಮ್ಮೆಂಬಳರವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಗ್ರಾಮ ಸಮಿತಿ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು. ಜೊತೆ ಕಾರ್ಯದರ್ಶಿ ಎಸ್.ಎಂ.ಬಶೀರ್ ರವರು ಧನ್ಯವಾದಗೈದರು.

Join Whatsapp