ಕಾರ್ಕಳ: ಪ್ರಚೋದನಾಕಾರಿ ಭಾಷಣ; ಬಜರಂಗದಳ ಮುಖಂಡರ ವಿರುದ್ಧ FIR

Prasthutha|

ಕಾರ್ಕಳ: ಪ್ರಚೋದನಾಕಾರಿ ಭಾಷಣದ ಮಾಡಿದ್ದ ಹಿನ್ನೆಲೆಯಲ್ಲಿ ಬಜರಂಗದಳದ ಮುಖಂಡರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

- Advertisement -


ಬಜರಂಗದಳದ ಮಂಗಳೂರು ವಿಭಾಗದ ಸಹ ಸಂಯೋಜಕ ಪುನೀತ್ ಅತ್ತಾವರ ಹಾಗೂ ಕಾರ್ಕಳ ನಗರ ಬಜರಂಗದಳ ಸಂಚಾಲಕ ಸಂಪತ್ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಆ. 13ರಂದು ಕಾರ್ಕಳ ನಗರ ಬಜರಂಗದಳ ವತಿಯಿಂದ ಕಾರ್ಕಳದಲ್ಲಿ ನಡೆದ ಪಂಜಿನ ಮೆರವಣಿಗೆ ಸಭಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಪುನೀತ್ ಅತ್ತಾವರ ಪ್ರಚೋದನಕಾರಿ ಹೇಳಿಕೆ ನೀಡಿದ್ದರು. ತಕ್ಷಣ, ಪೊಲೀಸರು ಕ್ರಮ ಕೈಗೊಂಡು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Join Whatsapp