ಸಾಮಾಜಿಕ ಕಾರ್ಯಕರ್ತ ತ್ವಾಹಿರ್ ಇಸ್ಮಾಯಿಲ್ ನಿಧನ: SDPI ಸಂತಾಪ

Prasthutha: January 13, 2022

ಮಂಗಳೂರು: ಮಂಗಳೂರಿನ ಸಾಮಾಜಿಕ ಕಾರ್ಯಕರ್ತರಾದ ತ್ವಾಹಿರ್ ಇಸ್ಮಾಯಿಲ್ ರವರ ನಿಧನಕ್ಕೆ SDPI ಸಂತಾಪ ವ್ಯಕ್ತಪಡಿಸಿದೆ.

ಉಳ್ಳಾಲದ ಮುಕ್ಕಚೇರಿ ನಿವಾಸಿಯಾಗಿರುವ ತ್ವಾಹಿರ್ ರವರು ಉದ್ಯಮಿ ಆಗಿದ್ದುಕೊಂಡು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಇವರ ಮರಣವು ಸಮಾಜ ಮತ್ತು ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.

SDPI ಪಕ್ಷದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ ತ್ವಾಹಿರ್ ರವರು ಪಕ್ಷದ ಹಿತವನ್ನು ಬಯಸುವವರಾಗಿದ್ದರು. ಯಾವಾಗಲೂ ಸಮಾಜದ ಒಳಿತನ್ನು ಬಯಸುತ್ತಿದ್ದ ಇವರ ಸತ್ಕಾರ್ಯವನ್ನು ಜಗದೊಡೆಯ ಸ್ವೀಕರಿಸಲಿ ಹಾಗೂ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಇವರ ಕುಟುಂಬ, ಬಂಧು ಬಳಗಕ್ಕೆ ಸೃಷ್ಟಿಕರ್ತ ನೀಡಲಿ ಮತ್ತು ಇವರ ಪರಲೋಕ ಜೀವನವು ಸಮೃದ್ಧಿಯಿಂದ ಕೂಡಿರಲಿ ಎಂದು SDPI ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಸಂತಾಪ ಸೂಚಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!