ಇಂಡಿಯನ್ ಸೋಶಿಯಲ್ ಫೋರಮ್ ಜುಬೈಲ್ ವತಿಯಿಂದ ಚಾಂಪಿಯನ್ ಟ್ರೋಫಿ 2022

Prasthutha|

ಜುಬೈಲ್: ಇಂಡಿಯನ್ ಸೋಶಿಯಲ್ ಫೋರಮ್, ಕರ್ನಾಟಕ ಚಾಪ್ಟರ್ ವತಿಯಿಂದ ಅಲ್ ಜುಬೈಲ್ ನ ಅಲ್ ಫಲಾಹ್ ಕ್ರಿಕೆಟ್ ಮೈದಾನದಲ್ಲಿ ಐ.ಎಸ್.ಎಫ್ ಚಾಂಪಿಯನ್ಸ್ ಟ್ರೋಫಿ 2022 ಅನ್ನು ಆಯೋಜಿಸಿತ್ತು.

- Advertisement -

ಜನವರಿ 6,7 ರಂದು ಪಂದ್ಯಾವಳಿಯಲ್ಲಿ ಒಟ್ಟು 11 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು. ಅಂತಿಮ ಸುತ್ತಿಗೆ ನಡೆದ ಪಂದ್ಯಾಟದಲ್ಲಿ ಅಲ್ ಫಲಾಹ್ ಕ್ರಿಕೆಟ್ ತಂಡ ಚಾಂಪಿಯನ್ ಮತ್ತು ಮಖಾವಿ ತಂಡ ರನ್ನರ್ಸ್ ಆಗಿ ಹೊರಹೊಮ್ಮಿತ್ತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಐ.ಎಸ್.ಎಫ್ ಜುಬೈಲ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಮುಹಮ್ಮದ್ ನಝೀರ್ ತುಂಬೆ, ಇಂಡಿಯನ್ ಸೋಶಿಯಲ್ ಫೋರಮ್ ನಮ್ಮ ಪ್ರವಾಸಿ ಸಮುದಾಯಕ್ಕೆ ಅವರ ಅಗತ್ಯದ ಸಮಯದಲ್ಲಿ ಸಾಧ್ಯವಿರುವ ಎಲ್ಲಾ ರೀತಿಯ ಸೇವೆ ಸಲ್ಲಿಸಲು ಯಾವಾಗಲೂ ಅವರ ಬೆಂಬಲಕ್ಕೆ ನಿಂತಿದೆ. ಸೌದಿ ಅರೇಬಿಯಾದಲ್ಲಿ ನಾವು ಅನೇಕ ಮಾನವೀಯ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಯಿತು. ಅದು ರಕ್ತದಾನ ಇರಲಿ, ಕಾರ್ಮಿಕರ ಸಮಸ್ಯೆ ಇರಲಿ ಅಥವಾ ವೈದ್ಯಕೀಯ ನೆರವೇ ಇರಲಿ, ಇಂಡಿಯನ್ ಸೋಶಿಯಲ್ ಫೋರಮ್ ಮುಂದೆ ನಿಂತು ಜನರಿಗೆ ಸೇವೆಯನ್ನು ನಿರ್ವಹಿಸಿದೆ ಮತ್ತು ಮುಂದುವರಿಸಲಿದೆ ಎಂದರು.

- Advertisement -

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಇಂಡಿಯಲ್ ಸೋಶಿಯಲ್ ಫೋರಮ್ ಸೌದಿ ಅರೇಬಿಯಾದ ಪ್ರಧಾನ ಕಾರ್ಯದರ್ಶಿ ಅಶ್ರಪ್ ಪುತ್ತೂರು, ಮಿಗ್ ಅರೇಬಿಯಾದ ನಿಶಾನ್ ಮತ್ತು ಶಮೀಲ್, ಫಹಾದ್ ಅಲ್ ತಮೀಮಿ ಕಾನೂನು ಸಂಸ್ಥೆಯ ಅಬ್ದುಲ್ ಅಝೀಝ್, ಬ್ಲೂ ಲೈನ್ ಕಂಪೆನಿಯ ಅಬ್ದುಲ್ ರಹ್ಮಾನ್, ಇಂಡಿಯಾ ಫ್ರೆಟರ್ನಿಟಿ ಫೋರಂ ನ ಜುಬೈಲ್ ಅಧ್ಯಕ್ಷರಾದ ಅಥಾವುಲ್ಲ ಇಬ್ರಾಹಿಂ, ಇಂಡಿಯಾ ಫ್ರೆಟರ್ನಿಟಿ ಫೋರಮ್ ಪೂರ್ವ ಪ್ರಾಂತ್ಯದ ಅಧ್ಯಕ್ಷ ಮುಹಮ್ಮದ್ ಇಂತಿಯಾಝ್, ಇಂಡಿಯನ್ ಸೋಶಿಯಲ್ ಫೋರಮ್ ದಮ್ಮಾಮ್ ಅಧ್ಯಕ್ಷ ಮೀರಜ್ ಗುಲ್ಬರ್ಗ, ಇಂಡಿಯನ್ ಸೋಶಿಯಲ್ ಫೋರಮ್ ದಮ್ಮಾಮ್ ಅಧ್ಯಕ್ಷರಾದ ಮೀರಜ್ ಗುಲ್ಬರ್ಗ, ಇಂಡಿಯನ್ ಸೋಶಿಯಲ್ ಫೋರಮ್ ಅಲ್ ಜುಬೈಲ್ ಕಾರ್ಯದರ್ಶಿ ಸೈಫುಲ್ಲಾ, ಮಖಾವಿ ಕಂಪೆನಿಯ ಅಬ್ದುಲ್ ರಝಾಕ್, ಫಾರ್ಚೂನ್ ಅರೇಬಿಯಾದ ಮುಹಮ್ಮದ್ ಅಲಿ, ಅಲ್ ಬಾತಿನ್ ಅಡ್ವಾನ್ಸ್ಡ್ ಕಾಂಟ್ರಾಕ್ಟಿಂಗ್ ಕಂಪನಿಯ ಮಹಮ್ಮದ್ ಮುಸ್ತಫಾ, ಇಂಡಿಯನ್ ಸೋಶಿಯಲ್ ಫೋರಮ್ ಜುಬೈಲ್ ಇದರ ರಫೀಕ್ ವಿಟ್ಲ, ಆಸಿಫ್ ಮಜೂರ್, ಶಂಸುದ್ದೀನ್ ದೇರಳಕಟ್ಟೆ, ಹಾಗೂ ಸಾಜಿದ್ ಸೂರಿಂಜೆ ಮತ್ತು ಇತರರು ಉಪಸ್ಥಿತರಿದ್ದರು.

ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಅಲ್ ಜುಬೈಲ್ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಅಶ್ರಫ್ ಸ್ವಾಗತಿಸಿ, ಆಶಿಕ್ ಮಾಚಾರ್ ಕಾರ್ಯಕ್ರಮ ನಿರೂಪಿಸಿದರು.

Join Whatsapp