‘ಸ್ಕೋಡಾ ಕುಶಾಕ್’ ಕಾರು ಮಂಗಳೂರು ಮಾರುಕಟ್ಟೆಯಲ್ಲಿ ಬಿಡುಗಡೆ

Prasthutha|

ಮಂಗಳೂರು, ಆ. 4: ‘ಸ್ಕೋಡಾ ಕುಶಾಕ್’ ಕಾರನ್ನು ನಗರದ ಚಿಲಿಂಬಿ-ಉರ್ವದ ಡಿಯೋ ಗ್ರೆಸಿಯಸ್ ಕಟ್ಟಡದ ಸ್ಕೋಡಾ ಅಟೋ ಇಂಡಿಯ-ಟಫೆ ಆಕ್ಸೆಸ್ ಶೋರೂಂನಲ್ಲಿ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ ಮಂಗಳೂರು ಮಾರುಕಟ್ಟೆಗೆ  ಬಿಡುಗಡೆಗೊಳಿಸಿದರು.

- Advertisement -

ಈ ಕಾರು ಸ್ಕೋಡಾ ಅಟೊ ಇಂಡಿಯದ ಪ್ರಾಜೆಕ್ಟ್-2ರ ಅಡಿಯಲ್ಲಿ ಉತ್ಪಾದಿಸಲ್ಪಟ್ಟ ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡಿದೆ.

ಬಳಿಕ ಮಾತನಾಡಿದ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಕೋಡಾ ಸಂಸ್ಥೆಯ ವಿನೂತನ ಕುಶಾಕ್ ಕಾರು ಮಂಗಳೂರು ಮಾರುಕಟ್ಟೆಗೆ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಕಾರನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ತಯಾರಿಸಲಾಗಿದೆ. ಇದರಿಂದ ದೇಶದ ಆರ್ಥಿಕ ಸ್ಥಿತಿಯೂ ಸುಧಾರಿಸಲಿದೆ. ಉತ್ಕೃಷ್ಟ ಗುಣಮಟ್ಟದ ಸ್ಕೊಡಾ ಕಾರುಗಳನ್ನು ಕರಾವಳಿಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವಂತಾಗಲಿ ಎಂದು ಶುಭ ನುಡಿದರು. ಸ್ಕೋಡಾ ಮಂಗಳೂರು ಬ್ರಾಂಚ್ ಇನ್ ಚಾರ್ಜ್ ಹಾಗೂ ಟಫೆ ಆಕ್ಸೆಸ್ ಲಿಮಿಟೆಡ್ ನ ಸೇಲ್ಸ್ ಮ್ಯಾನೇಜರ್ ಅಬೂಬಕರ್ ಸಿದ್ದೀಕ್ ಮಾತನಾಡಿ, ಸ್ಕೋಡಾ ಅಟೊ ಇಂಡಿಯ ಸಂಸ್ಥೆಯು ಭಾರತದಲ್ಲಿ ಕಳೆದ 20 ವರ್ಷಗಳಿಂದ ಉತ್ತಮ ಗುಣಮಟ್ಟದ ಕಾರುಗಳನ್ನು ಉತ್ಪಾದಿಸುತ್ತಿದೆ. ಅತ್ಯುತ್ತಮ ಜರ್ಮನ್ ಕಾರುಗಳ ಕೆಟಗರಿಯಲ್ಲಿ ಸ್ಕೋಡಾ ಕ್ರಾಂತಿ ಮಾಡಿದೆ ಎಂದರು.



Join Whatsapp