ಆರ್ ಎಸ್ ಎಸ್ ಮುಖ್ಯಸ್ಥ ಭಾಗವತ್ ಬಗ್ಗೆ ಅವಹೇಳನಕಾರಿ ಹೇಳಿಕೆ: ಯುವಕನನ್ನು ಬಂಧಿಸಿದ ಪೊಲೀಸರು

Prasthutha|

ಉತ್ತರ ಪ್ರದೇಶ, ಆ.4:  ಆರ್‌ ಎಸ್‌ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬಗ್ಗೆ ವಾಟ್ಸ್ ಆಪ್ ಮೆಸೆಜ್ ಮೂಲಕ ಅವಹೇಳನಕಾರಿ ಹೇಳಿಕೆ ನೀಡಿದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಆರೆಸ್ಸೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಯ ಜಿಲ್ಲಾ ಸಮನ್ವಯಾಧಿಕಾರಿ ನೀಡಿದ ದೂರಿನ ಮೇರೆಗೆ ಯುವಕನನ್ನು ಬಂಧಿಸಲಾಗಿದ್ದು ಆತನ ವಿರುದ್ಧ ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಗಣೇಶ್ ಕಾಲೋನಿಯ ವಿಶಾಲ್ ಮೌರ್ಯ, ಮೋಹನ್ ಭಾಗವತ್ ಬಗ್ಗೆ ಕೆಲವು ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದನು. ವಿಶಾಲ್ ಮೌರ್ಯ ಕಮೆಂಟ್ ಭಾಗವತರ ಭಾವನೆಗೆ ಧಕ್ಕೆ ತರುತ್ತದೆ ಎಂದು ಎಬಿವಿಪಿ ಜಿಲ್ಲಾ ಸಂಯೋಜಕ ಆಕಾಶ್ ಕುಮಾರ್ ದೂರು ನೀಡಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಚಕ್ರೇಶ್ ಮಿಶ್ರಾ ಹೇಳಿದರು.

- Advertisement -

ವ್ಯಕ್ತಿಯ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

Join Whatsapp