ಇಸ್ರೇಲ್ ಜೈಲಿನಿಂದ ಪರಾರಿಯಾದ ಕೈದಿಗಳಿಗಾಗಿ ವ್ಯಾಪಕ ಶೋಧ

Prasthutha|

ಟೆಲ್ ಅವೀವ್ : ಬಿಗಿ ಭದ್ರತೆಯ ಉತ್ತರ ಇಸ್ರೇಲ್ ನಲ್ಲಿರುವ ಜೈಲಿನಿಂದ ಕಳೆದ ತಡರಾತ್ರಿ ಪರಾರಿಯಾದ 6 ಫೆಲೆಸ್ತೀನ್ ಕೈದಿಗಳಿಗಾಗಿ ಇಸ್ರೇಲ್ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

- Advertisement -

ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಗಸ್ತನ್ನು ಹೆಚ್ಚಿಸಲಾಗಿದೆ. ಈ 6 ಮಂದಿ ಫೆಲೆಸ್ತೀನ್ ಪ್ರಾಧಿಕಾರ ನಿಯಂತ್ರಣದಲ್ಲಿರುವ ಜೆನಿನ್ ಗೆ ತೆರಳಿರುವ ಸಾಧ್ಯತೆಯಿದೆ ಎಂದು ಇಸ್ರೇಲ್ ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಜೆನಿನ್ ನಲ್ಲಿ ಇಸ್ರೇಲ್ ಪಡೆ ಮತ್ತು ಫೆಲೆಸ್ತೀನ್ ಪರ ಹೋರಾಟಗಾರರ ನಡುವೆ ಸಂಘರ್ಷ ನಡೆದಿತ್ತು.

ಕಳೆದ ತಡರಾತ್ರಿ 6 ಮಂದಿ ಕೈದಿಗಳು ಭಾರಿ ಭದ್ರತೆಯಿರುವ ಗಿಲ್ಬೋವಾ ಜೈಲಿನಿಂದ ಪರಾರಿಯಾಗಿದ್ದರು. ಈ ಕೈದಿಗಳು ಸುರಂಗ ಮಾರ್ಗದ ಮೂಲಕ ಹೊರಗಿನ ವ್ಯಕ್ತಿಗಳ ನೆರವಿನೊಂದಿಗೆ ಪರಾರಿಯಾಗಿದ್ದಾರೆಂದು ಇಸ್ರೇಲ್ ಮೂಲಗಳು ತಿಳಿಸಿವೆ.
ಈ ಘಟನೆ ಇಸ್ರೇಲ್ ಭದ್ರತಾ ವ್ಯವಸ್ಥೆಗೆ ತೀವ್ರ ಅಘಾತವನ್ನುಂಟು ಮಾಡಿದೆ ಮತ್ತು ಇಸ್ರೇಲ್ ವ್ಯವಸ್ಥೆಗೆ ತೀವ್ರ ಹೊಡೆತ ನೀಡಿದೆ ಎಂದು ಇಸ್ಲಾಮಿಕ್ ಚಳುವಳಿಯ ವಕ್ತಾರ ದಾವೂದ್ ಶೆಹಾಬ್ ತಿಳಿಸಿದರು.

- Advertisement -

ಫೆಲೆಸ್ತೀನ್ ವಿಮೋಚನೆಗೆ ಬೇಕಾದ ನಮ್ಮ ಹೋರಾಟ ಜೈಲಿನ ಒಳಗೂ, ಹೊರಗೂ ನಿರಂತರವಾಗಿ ಮುಂದುವರಿದಿರುವುದು ಈ ಘಟನೆಯಿಂದ ಸಾಬೀತಾಗಿದೆ ಎಂದು ಹಮಾಸ್ ವಕ್ತಾರ ಫೌಝಿ ಬರ್ಹೌಮ್ ತಿಳಿಸಿದ್ದಾರೆ.

ಇಸ್ರೇಲಿಗರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧನವಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ 4 ಮಂದಿ ಪರಾರಿಯಾದವರಲ್ಲಿ ಸೇರಿದ್ದಾರೆಂದು ಇಸ್ರೇಲ್ ಸೇನೆ ತಿಳಿಸಿದೆ. ಮಾತ್ರವಲ್ಲದೆ ಪಶ್ಚಿಮ ದಂಡೆಯ ಜೆನಿನ್ ನಗರದ ಮಾಜಿ ನಾಯಕ ಝಕರಿಯ ಜುಬೇದಿ ಅವರು ಈ ತಂಡದಲ್ಲಿದ್ದಾರೆಂದು ಇಸ್ರೇಲ್ ಹೇಳಿದೆ. ಜುಬೇದಿ ಅಲ್ ಹಕ್ಸಾ ಬ್ರಿಗೇಡ್ ನ ನಾಯಕನಾಗಿದ್ದು, 20 ವರ್ಷಗಳ ಹಿಂದೆ ನಡೆದ 2 ನೇ ಫೆಲೆಸ್ತೀನ್ ದಂಗೆ ಸಮಯದಲ್ಲಿ ಫತಾಹ್ ಚಳುವಳಿಗೆ ನೇತೃತ್ವ ನೀಡಿದ್ದರು.



Join Whatsapp