ಲಕ್ನೋ: ಆಲ್ಟ್ ನ್ಯೂಸ್ ಸಹ ಸ್ಥಾಪಕ ಮುಹಮ್ಮದ್ ಝುಬೈರ್ ವಿರುದ್ಧ 2017ರ ಧರ್ಮ ನಿಂದನೆಯ ಟ್ವೀಟ್ ಗಾಗಿ ಉತ್ತರ ಪ್ರದೇಶದಲ್ಲಿ ಆರು ಎಫ್ ಐಆರ್ ಗಳು ದಾಖಲಾಗಿರುವುದರಿಂದ ದಿಲ್ಲಿ ಮತ್ತು ಸೀತಾಪುರ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾಮೀನು ಪಡೆದರೂ ಬಿಡುಗಡೆ ಸಾಧ್ಯವಾಗುತ್ತಿಲ್ಲ.
ಆರು ಎಫ್ಐಆರ್ ಗಳನ್ನು ವಜಾ ಮಾಡುವಂತೆ ಹಾಗೂ ತುರ್ತು ವಿಚಾರಣೆ ನಡೆಸುವಂತೆ ಝುಬೈರ್ ಪರ ಹಾಜರಾದ ವಕೀಲರು ಮಾಡಿದ ಮನವಿಗೆ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರು ಈ ಅರ್ಜಿಯನ್ನು ಜಸ್ಟಿಸ್ ಡಿ. ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠದ ವಿಚಾರಣಾ ಪಟ್ಟಿಯಲ್ಲಿ ಸೇರಿಸುವುದಾಗಿ ಹೇಳಿದರು.
“ಆತ ಸುಳ್ಳು ಸುದ್ದಿಗಳ ನೈಜತೆಯನ್ನು ಜನರಿಗೆ ತಿಳಿಸುತ್ತಿದ್ದ ಪತ್ರಕರ್ತ. ಸಾಲಾಗಿ ಆತನ ಮೇಲೆ ಎಫ್ ಐಆರ್ ದಾಖಲಿಸಿದ್ದಾರೆ ಎಂಬುದೇ ಪ್ರಶ್ನಾರ್ಹ” ಎಂದು ಝುಬೈರ್ ಪರ ಹಾಜರಾಗಿದ್ದ ವಕೀಲೆ ವೃಂದಾ ಗ್ರೋವರ್ ಹೇಳಿದರು.