ಸಿಸ್ಟರ್ ಅಭಯಾ ಕೊಲೆ ಪ್ರಕರಣ | ಫಾದರ್ ಥಾಮಸ್, ಸಿಸ್ಟರ್ ಸೆಫಿಗೆ ಜೀವಾವಧಿ ಶಿಕ್ಷೆ; ತಲಾ 5 ಲಕ್ಷ ರೂ. ದಂಡ

Prasthutha|

ತಿರುವನಂತಪುರಂ : ಕೇರಳದ ಸಿಸ್ಟರ್ ಅಭಯಾ ಹತ್ಯೆ ಮಾಡಿ, ಬಾವಿಗೆಸೆದ ಪ್ರಕರಣದಲ್ಲಿ ದೋಷಿಗಳಾಗಿರುವ ಫಾದರ್ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿಗೆ ಜೀವಾವಧಿ ಶಿಕ್ಷೆ ಘೋಷಿಸಲಾಗಿದೆ. ಇಲ್ಲಿನ ವಿಶೇಷ ಸಿಬಿಐ ಕೋರ್ಟ್ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಯ ಪ್ರಮಾಣ ಇಂದು ಪ್ರಕಟಿಸಿದೆ.

- Advertisement -

ಇಬ್ಬರು ದೋಷಿಗಳಿಗೂ ತಲಾ 5 ಲಕ್ಷ ರೂ. ದಂಡ ಕೂಡ ವಿಧಿಸಲಾಗಿದೆ. ಸಾಕ್ಷ್ಯ ನಾಶ ಮಾಡಿದಕ್ಕಾಗಿ ಇಬ್ಬರಿಗೂ ಪ್ರತ್ಯೇಕ ಏಳು ವರ್ಷಗಳ ಜೈಲು ಶಿಕ್ಷೆಯನ್ನೂ ವಿಧಿಸಲಾಗಿದೆ.  1992ರಲ್ಲಿ ಕೊಟ್ಟಾಯಂ ಕಾನ್ವೆಂಟ್ ಒಂದರಲ್ಲಿ ಸಿಸ್ಟರ್ ಅಭಯಾ ಹತ್ಯೆ ನಡೆದಿತ್ತು. ಸರಿ ಸುಮಾರು 28 ವರ್ಷಗಳ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ಹೊರಬಿದ್ದಿದೆ.

ಪ್ರಕರಣದ ತೀರ್ಪು ನಿನ್ನೆ ನೀಡಲಾಗಿದ್ದು, ಇಬ್ಬರು ಆರೋಪಿಗಳನ್ನೂ ದೋಷಿಗಳೆಂದು ಪರಿಗಣಿಸಲಾಗಿತ್ತು. ಸಿಬಿಐ ಪ್ರಕಾರ, 1992, ಮಾ.27ರಂದು ಬೆಳಗ್ಗೆ 4:15ಕ್ಕೆ ಸಿಸ್ಟರ್ ಅಭಯಾ ಹಾಸ್ಟೆಲ್ ನಲ್ಲಿ ತನ್ನ ಕೋಣೆಯಿಂದ ಅಡುಗೆ ಕೋಣೆಗೆ ತೆರಳುವಾಗ, ಫಾದರ್ ಥಾಮಸ್ ಕೊಟ್ಟೂರ್, ಇನ್ನೋರ್ವ ಫಾದರ್ ಜೋಸ್ ಪೂತ್ರಿಕ್ಕೈಯಿಲ್ ಮತ್ತು ಸಿಸ್ಟರ್ ಸೆಫಿ ನಿಕಟ ಸಂಪರ್ಕದಲ್ಲಿದ್ದುದನ್ನು ನೋಡಿದ್ದರು.  

Join Whatsapp