ಹೊಸ ಕೊರೊನ ವೈರಸ್ ಭೀತಿ ನಡುವೆಯೂ ಜ.1ರಿಂದಲೇ SSLC, PUC ತರಗತಿಗಳ ಆರಂಭ ಖಚಿತ ಪಡಿಸಿದ ಸುರೇಶ್ ಕುಮಾರ್

Prasthutha|

ಬೆಂಗಳೂರು : ಹೊಸ ರೂಪಾಂತರಿತ ಕೋವಿಡ್ 19 ಸೋಂಕಿನ ಭೀತಿಯ ನಡುವೆಯೂ, ಈ ಮೊದಲೇ ನಿಗದಿ ಪಡಿಸಿದಂತೆ ಜ.1ರಿಂದಲೇ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ತರಗತಿಗಳು ಆರಂಭವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ದೃಢಪಡಿಸಿದ್ದಾರೆ.

ಹೊಸ ಕೊರೊನ ವೈರಸ್ ಹಿನ್ನೆಲೆಯಲ್ಲಿ ಶಾಲಾ, ಕಾಲೇಜುಗಳು ಆರಂಭವಾಗುವ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಆದರೆ, ಇಂದು ಈ ಬಗ್ಗೆ ಹೇಳಿಕೆ ನೀಡಿರುವ ಸುರೇಶ್ ಕುಮಾರ್, ಈ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

- Advertisement -

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆಗೆ ವೀಡಿಯೊ ಸಂವಾದ ನಡೆಸಿದ ಸುರೇಶ್ ಕುಮಾರ್, ನಿಗದಿಯಂತೆ ಶಾಲಾ ಕಾಲೇಜು ಆರಂಭಗೊಳ್ಳುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಎಲ್ಲಾ ಕೋವಿಡ್ ಮುಂಜಾಗ್ರತೆ ನಿಯಮಗಳನ್ನು ಅನುಸರಿಸುವಂತೆ ಅವರು ಆದೇಶಿಸಿದ್ದಾರೆ.

- Advertisement -