ಅಸ್ಸಾಮ್ ಪೊಲೀಸರ ಗುಂಡಿಗೆ ಬಲಿಯಾದ ಕಾರ್ಮಿಕನ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಹೊಣೆ ವಹಿಸಿಕೊಂಡ SIO

Prasthutha|

ನವದೆಹಲಿ: ಅಸ್ಸಾಂ ಪೊಲೀಸರ ಗುಂಡೇಟಿಗೆ ಬಲಿಯಾದ ಅಸ್ಸಾಂನ ಕೂಲಿ ಕಾರ್ಮಿಕ ಮುಈನುಲ್ ಹಖ್ ಅವರ ಮೂವರು ಮಕ್ಕಳ ಮುಂದಿನ ಶಿಕ್ಷಣದ ಸಂಪೂರ್ಣ ಹೊಣೆಯನ್ನು ಎಸ್ಐ ಓ ವಹಿಸಿಕೊಂಡಿದೆ.

- Advertisement -

ಎಸ್ ಐಓ ನ ರಾಷ್ಟ್ರೀಯ ಅಧ್ಯಕ್ಷ ಸಲ್ಮಾನ್ ಅಹ್ಮದ್ ಅವರ ನೇತೃತ್ವದ ನಿಯೋಗ ಅಸ್ಸಾಮ್ ಗೆ ಭೇಟಿ ನೀಡಿ ಹಕ್ ಅವರ ಕುಟುಂಬಕ್ಕೆ ಸಂತಾಪ ಹೇಳಿತು.

ಈ ವೇಳೆ ಮಾತನಾಡಿದ ಸಲ್ಮಾನ್ ಅಹ್ಮದ್, ಮುಈನುಲ್ ಹಖ್ ಅವರು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದು, ಕುಟುಂಬ ಅನಾಥವಾಗಿದೆ. ಹಖ್ ಅವರ ದೊಡ್ಡ ಮಗ ಮುಕಸ್ಸಿದ್ 7ನೇ ತರಗತಿ, ಎರಡನೇ ಮಗಳು ಮನ್ಸೂರಾ ಬೇಗಂ 3ನೇ ತರಗತಿಯಲ್ಲಿ ಓದುತ್ತಿದ್ದಾರೆ. ಅದೇ ರೀತಿ ಕೊನೆಯ ಮಗ ಮುಕದ್ದಿಸ್ ಅಂಗನವಾಡಿಗೆ ಹೋಗುತ್ತಿದ್ದಾನೆ. ಈ ಮೂರೂ ಮಕ್ಕಳ ಮುಂದಿನ ವಿದ್ಯಾಭ್ಯಾಸದ ಎಲ್ಲಾ ಖರ್ಚು ವೆಚ್ಚಗಳನ್ನು ಸಂಪೂರ್ಣವಾಗಿ ಎಸ್ ಐಒ ಭರಿಸಲಿದೆ. ಈ ಮಕ್ಕಳು ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಯಾವುದೇ ಪದವಿ ಪಡೆಯಲು ಇಚ್ಛಿಸಿದರೂ ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಡಲಾಗುವುದು. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಲು ಈ ಮಕ್ಕಳು ಇಚ್ಛಿಸಿದರೆ ಅದರ ಖರ್ಚು ವೆಚ್ಚಗಳನ್ನು ಭರಿಸಲಾಗುವುದು ಎಂದು ತಿಳಿಸಿದರು.

Join Whatsapp