ಒಂಟಿಯಾದ ಝೆಲೆನ್‌ಸ್ಕಿ ಫೋಟೋ ವೈರಲ್‌ !

Prasthutha|

ಕೀವ್‌: ರಷ್ಯಾದ ಯುದ್ದೋನ್ಮಾದದಿಂದ ಈಗಾಗಲೇ ಹೈರಾಣಾಗಿರುವ ಉಕ್ರೇನ್‌ ಅಧ್ಯಕ್ಷ ವೊಲೋಡಿಮಿರ್‌ ಝೆಲೆನ್‌ಸ್ಕಿ ಜಾಗತಿಕ ವೇದಿಕೆಗಳಲ್ಲಿ ಹಲವಾರು ಬಾರಿ ಉಕ್ರೇನ್‌ ಸಹಾಯಕ್ಕೆ ನಿಲ್ಲದ ರಾಷ್ಟ್ರಗಳ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.

- Advertisement -

 ಈಗ ಅವರು ಅಂಥದ್ದೇ ಅಸಮಾಧಾನದ ಚರ್ಯೆಯಲ್ಲಿರುವ ಫೋಟೋ ಒಂದು ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದ್ದು, ಝೆಲೆನ್‌ಸ್ಕಿ ಒಬ್ಬೊಂಟಿಯಾಗಿ ಬಿಟ್ಟರು ಎನ್ನುವಂಥೆ ನೆಟ್ಟಿಗರು ಬಿಂಬಿಸಿದ್ದಾರೆ.

ಇತ್ತೀಚೆಗಷ್ಟೇ ನಡೆದ ನ್ಯಾಟೊ ರಾಷ್ಟ್ರಗಳ ಶೃಂಗಸಭೆಯಲ್ಲಿ ಝೆಲೆನ್‌ಸ್ಕಿ ಭಾಗಿಯಾಗಿದ್ದರು. ಈ ವೇಳೆ ಫೋಟೋ ಒಂದನ್ನು ಕ್ಲಿಕ್ಕಿಸಲಾಗಿದೆ. ಅದರಲ್ಲಿ ಬೇರೆ-ಬೇರೆ ರಾಷ್ಟ್ರದ ಪ್ರತಿನಿಧಿಗಳು ಒಬ್ಬರನ್ನೊಬ್ಬರು ಆಲಿಂಗಿಸಿ, ಮಾತನಾಡಿಸುತ್ತಿದ್ದರೆ. ಇತ್ತ ಝೆಲೆನ್‌ಸ್ಕಿ ಮಾತ್ರ ಒಬ್ಬಂಟಿಯಾಗಿ ಏನೋ ಯೋಚಿಸುತ್ತಾ ನಿಂತಿದ್ದಾರೆ. ಈ ಹಿನ್ನೆಯಲ್ಲಿ ಕೆಲ ನೆಟ್ಟಿಗರು ನ್ಯಾಟೊ ಸೇರುವ ವಿಚಾರದಲ್ಲಿ ಉಕ್ರೇನ್‌ ರಷ್ಯಾವನ್ನು ಎದುರು ಹಾಕಿಕೊಂಡಿತು. ಆದರೆ ನ್ಯಾಟೊ ರಾಷ್ಟ್ರಗಳು ಈಗ ಉಕ್ರೇನ್‌ ಅನ್ನು ಒಂಟಿ ಮಾಡಿಬಿಟ್ಟವು ಎಂದಿದ್ದಾರೆ. ಮತ್ತೂ ಕೆಲವರು ಆಹ್ವಾನವಿಲ್ಲದವರ ಮನೆಗೆ ಹೋದರೆ ಹೀಗೆಯೇ ಆಗುವುದು ಎಂದೆಲ್ಲಾ ಛೇಡಿಸಿದ್ದಾರೆ.



Join Whatsapp