ಫೋಟೋಗೆ ಅನುಮತಿ ನಿರಾಕರಣೆ: ಗಾಯಕ ಸೋನು ನಿಗಮ್ ಮೇಲೆ ಹಲ್ಲೆ

Prasthutha|

ಮುಂಬೈ: ಫೋಟೋಗೆ ಅನುಮತಿ ನೀಡಿಲ್ಲ ಎಂಬ ಕಾರಣಕ್ಕೆ ಗಾಯಕ ಸೋನು ನಿಗಮ್ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆ ಮುಂಬೈನ ಸಂಗೀತ ಕಾರ್ಯಕ್ರಮವೊಂದರಲ್ಲಿ ನಡೆದಿದೆ.
ಈ ಬಗ್ಗೆ ಸೋನು ನಿಗಮ್ ದೂರು ದಾಖಲಿಸಿದ್ದಾರೆ.

- Advertisement -

ಕಾರ್ಯಕ್ರಮದ ವೇದಿಕೆಯಿಂದ ವ್ಯಕ್ತಿಯೊಬ್ಬ ಸೋನು ನಿಗಮ್ ಹಾಗೂ ಅವರ ತಂಡದವರ ಮೇಲೆ ಹಲ್ಲೆ ಮಾಡಿ ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಶಾಸಕ ಪ್ರಕಾಶ್ ಫರ್ತೆಪೇಕರ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಸೋನು ನಿಗಮ್ ಅವರ ಜೊತೆಗೆ ಸೆಲ್ಪಿ ತೆಗೆಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದು ಸಾಕಷ್ಟು ನೂಕುನುಗ್ಗಲು ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಶಾಸಕರ ಭೇಟಿಗೆ ಅವಕಾಶ ನೀಡಿದ್ದಕ್ಕೆ ಬೆಂಬಲಿಗರು ಗಲಾಟೆ ನಡೆಸಿದ್ದು, ಸೋನು ನಿಗಮ್ ಭ್ರದ್ರತಾ ಸಿಬ್ಬಂದಿ ಹಾಗೂ ಶಾಸಕರ ಬೆಂಬಲಿಗರ ನಡುವೆ ಗಲಾಟೆ ನಡೆದಿದ್ದು, ಸೋನು ನಿಗಮ್ ಸೇರಿದಂತೆ ಹಲವರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪವು ಕೇಳಿಬಂದಿದೆ.
ಈ ಬಗ್ಗೆ ಮಾತನಾಡಿದ ಗಾಯಕ ಸೋನು ನಿಗಮ್, “ಸಂಗೀತ ಕಾರ್ಯಕ್ರಮದ ನಂತರ ನಾನು ವೇದಿಕೆಯಿಂದ ಕೆಳಗೆ ಬರುತ್ತಿದ್ದಾಗ ವ್ಯಕ್ತಿಯೊಬ್ಬರು ನನ್ನನ್ನು ಹಿಡಿದಿದ್ದರು. ನಂತರ ಅವರು ನನ್ನನ್ನು ರಕ್ಷಿಸಲು ಬಂದ ನನ್ನ ಅಂಗರಕ್ಷಕ ಹರಿ ಮತ್ತು ರಬ್ಬಾನಿ ಅವರನ್ನು ತಳ್ಳಿದ್ದಾರೆ, ನಂತರ ನಾನು ಮೆಟ್ಟಿಲುಗಳ ಮೇಲೆ ಬಿದ್ದೆ. ಸಾಮಾನ್ಯ ಜನರಲ್ಲಿ ಜಾಗೃತಿ ಮೂಡಿಸಲು ದೂರು ನೀಡಿದ್ದೇನೆ. ಜನರು ಬಲವಂತವಾಗಿ ಸೆಲ್ಫಿ ಅಥವಾ ಫೋಟೋಗಳನ್ನು ಪಡೆಯಲು ಪ್ರಯತ್ನಿಸಿದಾಗ, ಗಲಾಟೆ, ಗದ್ದಲಗಳ ಪರಿಣಾಮದ ಬಗ್ಗೆ ಯೋಚಿಸಬೇಕು ಎಂದು ನಾನು ದೂರು ದಾಖಲಿಸಿದ್ದೇನೆ” ಎಂದು ಹೇಳಿದ್ದಾರೆ.

- Advertisement -

Join Whatsapp