ಕೊಲೊಂಬೊ; ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ಪಲಾಯನಗೈದ ಶ್ರೀಲಂಕಾ ಅಧ್ಯಕ್ಷರಿಗೆ ಆಶ್ರಯ ನೀಡಲು ಸಿಂಗಾಪುರ ಸರ್ಕಾರ ಹಿಂದೇಟು ಹಾಕಿದೆ. ಇದೀಗ ಗೋಟಬಯ ರಾಜಪಕ್ಸ ಅರಬ್ ರಾಷ್ಟ್ರ ಜಿದ್ದಾ, ಸೌದಿಗೆ ತೆರಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರನ್ನು ಖಾಸಗಿ ಭೇಟಿಗಾಗಿ ಮಾತ್ರ ನಮ್ಮ ದೇಶಕ್ಕೆ ಅನುಮತಿಸಲಾಗಿದೆ. ನಾವು ಆಶ್ರಯ ನೀಡಲು ಅನುಮತಿಸಿಲ್ಲ ಎಂದು ಸಿಂಗಾಪುರ ಸರಕಾರ ಸ್ಪಷ್ಟಪಡಿಸಿದ್ದು, ಶ್ರೀಲಂಕಾದಿಂದ. ಪಲಾಯನಗೈದ ಅಧ್ಯಕ್ಷರಿಗೆ ನೆಲೆ ನೀಡಲು ಸಿಂಗಾಪುರ ಹಿಂದೇಟು ಹಾಕಿದೆ ಎಂದು ವರದಿಯಾಗಿದೆ.
ಸಿಂಗಾಪುರ ಸಾಮಾನ್ಯವಾಗಿ ಆಶ್ರಯದ ಮನವಿ ಸ್ವೀಕರಿಸುವುದಿಲ್ಲ ಎಂದು ಸಿಂಗಾಪುರದ ವಿದೇಶಾಂಗ ಸಚಿವಾಲಯ ಹೇಳಿದೆ.
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಹಿನ್ನಲೆಯಲ್ಲಿ ಜನಾಕ್ರೋಶ ಭುಗಿಲೆದ್ದಾಗ ಗೊಟಬಯ ಶ್ರೀಲಂಕಾದಿಂದ ಪಲಾಯನ ಮಾಡಿ ಮಾಲ್ಡೀವ್ಸ್ ನಲ್ಲಿ ನೆಲೆಸಿದ್ದರು. ರಾಜಪಕ್ಸ ಅವರು ಮಾಲ್ಡೀವ್ಸ್ ನಿಂದ ದಿಡೀರ್ ಸೌದಿ ಏರ್ ಲೈನ್ ಮೂಲಕ ಸಿಂಗಾಪುರಕ್ಕೆ ತೆರಳಿದ್ದಾರೆ.
ಸಿಂಗಾಪುರದಿಂದ ಇನ್ನು ಜಿದ್ದಾ ನಂತರ ಸೌದಿ ಅರೇಬಿಯಾಕ್ಕೆ ಹೋಗಲಿದ್ದಾರೆ ಎಂದು ಮಾಲ್ಡೀವ್ಸ್ ಸರ್ಕಾರದ ಅಧಿಕಾರಿಗಳು ಹೇಳಿರುವ ಬಗ್ಗೆ ವರದಿಯಾಗಿದೆ. ರಾಜಪಕ್ಸೆ ಆಶ್ರಯಕ್ಕೆ ಅರಬ್ ರಾಷ್ಟ್ರ ಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ