ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರಿಗೆ ವೈದ್ಯಕೀಯ ನೆರವು ನಿರಾಕರಣೆ: ಆದಿತ್ಯನಾಥ್ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ದಾವೆ

Prasthutha|

ಆಗ್ರಾ: ಹತ್ರಾಸ್ ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರಿಗೆ ಉ.ಪ್ರ ಸರ್ಕಾರ ವೈದ್ಯಕೀಯ ನೆರವನ್ನು ತಡೆಹಿಡಿದಿದೆ ಎಂದು ಆರೋಪಿಸಿ ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಸುಪ್ರೀಮ್ ಕೋರ್ಟ್ ನಲ್ಲಿ ದಾವೆ ಹೂಡಿದೆ. ಸುಪ್ರೀಮ್ ಕೋರ್ಟಿನ ಆದೇಶದ ಹೊರತಾಗಿಯೂ ಆದಿತ್ಯನಾಥ್ ಸರಕಾರ ಅಗತ್ಯ ವೈದ್ಯಕೀಯ ನೆರವನ್ನು ನಿರಾಕರಿಸಿದೆ ಎನ್ನಲಾಗಿದೆ.

- Advertisement -

ಅನಾರೋಗ್ಯಕ್ಕೀಡಾದ ಕಾಪ್ಪನ್ ಅವರನ್ನು ಚೇತರಿಸಿಕೊಂಡ ನಂತರವೇ ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಬೇಕೆಂದು ಅಧಿಕಾರಿಗಳಿಗೆ ಈ ವರ್ಷದ ಏಪ್ರಿಲ್ ನಲ್ಲಿ ನ್ಯಾಯಾಲಯದ ಆದೇಶವಿದ್ದರೂ ಅವರನ್ನೂ ಅಲ್ಲಿಂದ ಆತುರದಲ್ಲಿ ಡಿಸ್ಚಾರ್ಜ್ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.

ಈ ಸಂಬಂಧ ಸುಪ್ರೀಮ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಮ್ಯಾಥ್ಯೂಸ್, ಇದು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದ ಸ್ಪಷ್ಟವಾದ ಉಲ್ಲಂಘಣೆ ಎಂದು ಅವರು ಉಲ್ಲೇಖಿಸಿದ್ದಾರೆ. ಪ್ರಸಕ್ತ ಕಾಪ್ಪನ್ ಅವರು ಬಾತ್ ರೂಮ್ ನಲ್ಲಿ ಬಿದ್ದು ದವಡೆಗೆ ಗಾಯಗಳಾಗಿದ್ದು, ಒಂದು ಹಲ್ಲು ನೇತಾಡುತ್ತಿದೆ ಮತ್ತು ಇನ್ನೊಂದು ಹಲ್ಲು ನಾಳಗಳಲ್ಲಿ ಸಿಲುಕಿಕೊಂಡಿದೆ. ಮಾತ್ರವಲ್ಲ ಕೋವಿಡ್ ಮತ್ತು ನರಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಥುರಾ ಜಿಲ್ಲಾ ನ್ಯಾಯಾಲಯದ ಗಮನಕ್ಕೆ ತರಲಾಗಿದ್ದು, ಸೂಕ್ತ ಚಿಕಿತ್ಸೆಯನ್ನು ಒದಗಿಸುವಂತೆ ಆದೇಶಿಸಿದೆ ಎಂದು ಮ್ಯಾಥ್ಯೂ ಅವರು ಸುಪ್ರೀಂ ಕೋರ್ಟ್ ಗೆ ತಿಳಿಸಿದರು.

- Advertisement -

ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಾಪ್ಪನ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನಾಯಕರಾದ ಅತೀಕುರ್ ರಹ್ಮಾನ್, ಮಸೂದ್ ಅಹ್ಮದ್ ಮತ್ತು ದೆಹಲಿ ಮೂಲದ ಕ್ಯಾಬ್ ಚಾಲಕ ಮುಹಮ್ಮದ್ ಆಲಂ ಎಂಬವರು ಯುಎಪಿಎ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿದ್ದಾರೆ. ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಿ ಸತ್ಯಶೋಧನಾ ವರದಿಯನ್ನು ತಯಾರಿಸಲು ತೆರಳಿದ್ದ ತಂಡದ ಮೇಲೆ ಉತ್ತರಪ್ರದೇಶ ಸರ್ಕಾರ ಭಯೋತ್ಪಾದನೆ ಸುಳ್ಳಾರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಿ ಜೈಲಿನಲ್ಲಿರಿಸಿದೆ.



Join Whatsapp