ಡಿಕೆಶಿಯವರೇ ನಿಮ್ಮ ಬಳಿ ಬರುವವರು ಹೆಲ್ಮೆಟ್ ಇಟ್ಟುಕೊಳ್ಳಬೇಕೆ? ಡಿಕೆಶಿ ವಾಹನ ಹೇಳಿಕೆಗೆ ಬಿಜೆಪಿ ತಿರುಗೇಟು!

Prasthutha|

ಬೆಂಗಳೂರು: ಬಿಜೆಪಿ ನಾಯಕರ ಕಾರು ನಿಮ್ಮ ಪಕ್ಕ ಬರುವಾಗ ಕ್ಯಾಮೆರಾ ರೆಕಾರ್ಡ್ ಮಾಡಿಟ್ಟುಕೊಳ್ಳಿ, ಯಾವಾಗ, ಯಾರ ಮೇಲೆ ಕಾರು ಹತ್ತಿಸಿ ಕೊಲ್ಲುತ್ತಾರೆ ತಿಳಿಯುವುದಿಲ್ಲ ಬಿಜೆಪಿಯನ್ನು ಕುಟುಕಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಗೆ, ಬಿಜೆಪಿ ನಿಮ್ಮ ಬಳಿ ಬರುವವರು ಹೆಲ್ಮೆಟ್ ಧರಿಸಿ ಬರಬೇಕೆ ಎಂದು ಪ್ರಶ್ನಿಸಿ ತಿರುಗೇಟು ನೀಡಿದೆ.

- Advertisement -

ತನ್ನ ಅಧಿಕೃತ ಬಿಜೆಪಿ ಕರ್ನಾಟಕ ಟ್ವಿಟರ್ ಖಾತೆಯಲ್ಲಿ ತಿರುಗೇಟು ನೀಡಿರುವ ಬಿಜೆಪಿ “ಡಿಕೆಶಿ ಅವರೇ ನಿಮ್ಮ ಬಳಿ ಬರುವವರು ಏನು ಮಾಡಬೇಕು? ತಲೆಗೆ ಹೆಲ್ಮೆಟ್ ಧರಿಸಿಕೊಂಡು ಬರಬೇಕೇ ಎಂದು ಕಾರ್ಯಕರ್ತನೋರ್ವನಿಗೆ ಡಿಕೆ ಶಿವಕುಮಾರ್ ಕಪಾಲಮೋಕ್ಷ ಗೈದಿದ್ದ ವಿಡೀಯೋವನ್ನ ಶೇರ್ ಮಾಡಿದೆ.

ಅಲ್ಲದೇ ಜನರು ಈಗಾಗಲೇ ನಿಮ್ಮ ಹಾಗೂ‌ ನಿಮ್ಮ ಪಕ್ಷದ ಮುಖಂಡರ ಭಾವಚಿತ್ರ ತೆಗೆದುಕೊಳ್ಳಲಾರಂಭಿಸಿದ್ದಾರೆ. ಕಂಡ ಕಂಡವರ ಮೇಲೆ ಹಲ್ಲೆ ಮಾಡುವುದು, ಕೊಲ್ಲುವುದು ನಿಮ್ಮ ಪಕ್ಷದ ಹಳೆ ಚಾಳಿಯಲ್ಲವೇ? ಸಾವಿರಾರು ಮುಗ್ದ ಸಿಖ್ಖರಿಗೂ, ನಾವು ಕಾಂಗ್ರೆಸ್ಸಿಗರಿಂದ ಕೊಲ್ಲಲ್ಪಡುತ್ತೇವೆ ಎಂಬ ಸುಳಿವಿರಲಿಲ್ಲ ಎಂದು ಟ್ವೀಟ್ ಮಾಡಿದೆ.

Join Whatsapp