ಕೊನೆಗೂ ಜೈಲಿನಿಂದ ಸಿದ್ದೀಕ್ ಕಾಪ್ಪನ್​​ ಬಿಡುಗಡೆ

Prasthutha|

- Advertisement -

ಹೊಸದಿಲ್ಲಿ: ಕೇರಳದ ಹಿರಿಯ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಎರಡು ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದು, ತಾಯಿ ಇಲ್ಲದ ನೋವಿನೊಂದಿಗೆ ತಾಯ್ನಾಡಿಗೆ ಹೊರಟಿದ್ದಾರೆ.

ಉತ್ತರಪ್ರದೇಶದ ಲಕ್ನೋ ಜೈಲಿನಿಂದ ಇಂದು ಬೆಳಗ್ಗೆ ಬಿಡುಗಡೆಯಾದ ಕಾಪ್ಪನ್, ಸುದ್ದಿಗಾರರೊಂದಿಗೆ ಮಾತನಾಡಿ, ತಾಯಿ ಈ ಭೂಮಿಯಲ್ಲಿ ಇಲ್ಲ ಎಂಬ ನೋವು ನನ್ನನ್ನು ಕಾಡುತ್ತಿದೆ. ಸತ್ಯಕ್ಕೆ ಯಾವತ್ತೂ ಜಯಸಿಗಲಿದೆ. ಮಹಾತ್ಮ ಗಾಂಧಿ, ಭಗತ್ ಸಿಂಗ್ ಅವರನ್ನೂ ಭಯೋತ್ಪಾದಕ ಎಂದು ಕರೆಯಲಾಗಿತ್ತು. ಒಂದೊಂದು ಕಾಲದಲ್ಲಿ ಒಬ್ಬೊಬ್ಬರನ್ನು ಭಯೋತ್ಪಾದಕ ಎಂದು ಗುರಿಪಡಿಸಲಾಗುತ್ತಿದೆ. ಈ ಹೆಸರಿನಲ್ಲಿ ಯಾರನ್ನೂ ಯಾವ ಹೋರಾಟವನ್ನೂ ಸದೆಬಡಿಯಲು ಸಾಧ್ಯವಿಲ್ಲ ಎಂದು ಹೇಳಿದರು.

- Advertisement -

ತನ್ನ ವಿರುದ್ಧದ 2 ಪ್ರಕರಣಗಳಲ್ಲಿ ಜಾಮೀನು ಪಡೆದ ತಿಂಗಳಿಗೂ ಹೆಚ್ಚು ಸಮಯದ ನಂತರ ಲಕ್ನೋದ ವಿಶೇಷ ನ್ಯಾಯಾಲಯವು ಅವರನ್ನು ಬಿಡುಗಡೆಗೊಳಿಸುವ ಆದೇಶಕ್ಕೆ ಸಹಿ ಹಾಕಿದೆ.

 ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ 2022ರ ಡಿಸೆಂಬರ್ 23ರಂದು ಪಿಎಂಎಲ್‌ಎ ಪ್ರಕರಣದಲ್ಲಿ ಕಾಪ್ಪನ್ ಅವರಿಗೆ ಜಾಮೀನು ಮಂಜೂರು ಮಾಡಿತ್ತು.

Join Whatsapp