ಸಿದ್ದೀಕ್ ಕಪ್ಪನ್ ಜಾಮೀನಿಗೆ ಅರ್ನಾಬ್ ಗೋಸ್ವಾಮಿ ಕೇಸ್ ಮೇಲೆ ಅವಲಂಬಿತನಾಗಿದ್ದೇನೆ : ಸುಪ್ರೀಂ ಕೋರ್ಟ್ ಗೆ ಕಪಿಲ್ ಸಿಬಲ್

Prasthutha|

ನವದೆಹಲಿ : ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಬಿಡುಗಡೆಗೆ ತಾವು ಅರ್ನಾಬ್ ಗೋಸ್ವಾಮಿ ಪ್ರಕರಣದ ಜಾಮೀನು ಆದೇಶವನ್ನು ಅವಲಂಬಿದ್ದೇನೆ ಎಂದು ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ ಮುಂದೆ ತಮ್ಮ ವಾದ ಮಂಡಿಸಿದ್ದಾರೆ.

ಆತ್ಮಹತ್ಯೆ ಪ್ರಚೋದನೆ ಪ್ರಕರಣದಲ್ಲಿ ಬಂಧಿತನಾಗಿದ್ದ, ಟಿವಿ ನಿರೂಪಕ ಅರ್ನಾಬ್ ಗೋಸ್ವಾಮಿ ಪ್ರಕರಣದಲ್ಲಿ, ಆತನ ಜಾಮೀನು ಅರ್ಜಿ ಸೆಶನ್ಸ್ ಕೋರ್ಟ್ ನಲ್ಲಿ ಬಾಕಿಯಿರುವಾಗಲೇ ಸುಪ್ರೀಂ ಕೋರ್ಟ್ ಆತನಿಗೆ ಜಾಮೀನು ನೀಡಿತ್ತು ಎಂಬುದನ್ನು ಸಿಬಲ್ ನೆನಪಿಸಿದ್ದಾರೆ.

- Advertisement -

ಸಿಜೆಐ ಎಸ್.ಎ. ಬೋಬ್ಡೆ, ನ್ಯಾ. ವಿ.ಸುಬ್ರಮಣಿಯನ್, ನ್ಯಾ. ಎ.ಎಸ್. ಬೋಪಣ್ಣ ನ್ಯಾಯಪೀಠದ ಮುಂದೆ ಕೇರಳ ಕಾರ್ಯನಿರತ ಪತ್ರಕರ್ತರ ಸಂಘದ ಪರವಾಗಿ ಸಿಬಲ್ ವಾದ ಮಂಡಿಸಿದ್ದಾರೆ.

ಹಥ್ರಾಸ್ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂದರ್ಭ ಬಾಲಕಿಯ ಕುಟುಂಬವನ್ನು ಭೇಟಿಯಾಗಿ ವರದಿ ಮಾಡಲು ತೆರಳಿದ್ದ ವೇಳೆ ಸಿದ್ದೀಕ್ ಕಪ್ಪನ್ ರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿ, ಕಠಿಣ ಕಾನೂನುಗಳಡಿ ಪ್ರಕರಣ ದಾಖಲಿಸಿಕೊಂಡಿದ್ದರು.  

- Advertisement -