ರಿಲಾಕ್ಸ್ ಮೂಡ್ ನಲ್ಲಿ ಸಿದ್ಧರಾಮಯ್ಯ: ಆಪ್ತರ ಜೊತೆ ಕಬಿನಿಯಲ್ಲಿ ಬೋಟಿಂಗ್

Prasthutha|

ಮೈಸೂರು: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಪರಮಾಪ್ತರ ಜೊತೆ ಬೋಟಿಂಗ್ ಜಂಗಲ್ ಸಫಾರಿ ಮಾಡುವ ಮೂಲಕ ರಿಲಾಕ್ಸ್ ಮೂಡ್ ನಲ್ಲಿದ್ದಾರೆ.

- Advertisement -

ಸಿದ್ದರಾಮಯ್ಯ ಅವರು ಕಳೆದ ಎರಡು ದಿನಗಳಿಂದ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆಯ ಕಬಿನಿ ಹಿನ್ನಿರಿನಲ್ಲಿರುವ ಆರೆಂಜ್ ಕೌಂಟಿ ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವಿಶ್ರಾಂತಿ ನಡುವೆ ಬೋಟಿಂಗ್ ಕೂಡ ಹೋಗಿದ್ದಾರೆ. ಅಲ್ಲದೇ ಕಾಡಿನೊಳಗೆ ಸಫಾರಿ ಕೂಡ ಮಾಡಿದ್ದಾರೆ.

ಸಿದ್ದರಾಮಯ್ಯ ಅವರ ಪರಮಾಪ್ತರಾದ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಪಿರಿಯಾಪಟ್ಟಣ ವೆಂಕಟೇಶ್ ಕೂಡ ಅವರ ಜೊತೆಯಲ್ಲೇ ಇದ್ದಾರೆ. ಶಾಸಕರಾದ ಎಚ್.ಪಿ. ಮಂಜುನಾಥ್, ಅನಿಲ್ ಚಿಕ್ಕಮಾದು ಸೇರಿದಂತೆ ಕೆಲವು ಮುಖಂಡರು ಸಿದ್ದರಾಮಯ್ಯ ಅವರ ಜೊತೆ ಕಾಡು ಸುತ್ತಿದ್ದಾರೆ. ಸದ್ಯ ಇದರ ಫೋಟೋ ಹಾಗೂ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.



Join Whatsapp