ಶಿವಮೊಗ್ಗ ಕೋಮು ಗಲಭೆಗೆ ಸಿದ್ದರಾಮಯ್ಯ, ಪರಮೇಶ್ವರ ಕುಮ್ಮಕ್ಕು: ಶೋಭಾ ಕರಂದ್ಲಾಜೆ

Prasthutha|

ಚಾಮರಾಜನಗರ: ಶಿವಮೊಗ್ಗದ ರಾಗಿ ಗುಡ್ಡದಲ್ಲಿ ನಡೆದ ಗಲಭೆಗೆ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ಕಾರಣ ಎಂದು ಕೇಂದ್ರ ಸಚಿವೆ ಶೋಭಾ ಕರಾಂದ್ಲಾಜೆ ಆರೋಪಿಸಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈದ್ ಮಿಲಾದ್ ಮೆರವಣಿಗೆ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಔರಂಗಜೇಬನ ಖಡ್ಗ ಮೆರವಣಿಗೆ ಮಾಡುತ್ತಿದ್ದಾರೆ. ಆ ಖಡ್ಗದ ತುದಿಗೆ ರಕ್ತದ ಬಣ್ಣ ಹಾಕಿದ್ದಾರೆ. ಹಿಂದೂಗಳ ರಕ್ತ ಬೀಳುತ್ತದೆ ಎಂದು ಉರ್ದುವಿನಲ್ಲಿ ಬರೆದಿದ್ದಾರೆ ಎನ್ನುವ ಮಾಹಿತಿಯಿದೆ. ಮುಸಲ್ಮಾನ ಸಮಾಜದ ಮಾನಸಿಕತೆ ಏನು, ಅವರು ಏನು ಮಾಡಲು ಹೊರಟಿದ್ದಾರೆ. ಯಾಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

Join Whatsapp