ಕುಮಾರಸ್ವಾಮಿ ಪ್ಯಾಂಟ್ ಒಳಗೆ RSS ಚೆಡ್ಡಿ ಹಾಕಿದ್ದು ಗೊತ್ತೇ ಆಗಲಿಲ್ಲ: ಸಚಿವ ಝಮೀರ್

Prasthutha|

ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಸಕಲ ವಿದ್ಯೆಗಳೂ ನನಗೆ ಗೊತ್ತಿತ್ತು. ಆದರೆ, ಅವರು ಪ್ಯಾಂಟ್ ಒಳಗೆ ಆರ್ ಎಸ್ ಎಸ್ ಚೆಡ್ಡಿ ಹಾಕಿದ್ದು ಗೊತ್ತೇ ಆಗಲಿಲ್ಲ’ ಎಂದು ಸಚಿವ ಝಮೀರ್ ಅಹ್ಮದ್ ಹೇಳಿದ್ದಾರೆ.

- Advertisement -


ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ನಾನಾ ಜೆಡಿಎಸ್ ಮುಖಂಡರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜೆಡಿಎಸ್ನಿಂದ ಹೊರಬರುತ್ತಿರುವ ಪ್ರಮುಖರನ್ನು ನಗರದ ಅರಮನೆ ಮೈದಾನದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಿ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳಲಾಗುವುದು’ ಎಂದು ಹೇಳಿದರು.


ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿಯಿಂದ ಜಾತ್ಯತೀತ ಮನೋಭಾವದ ನೂರಾರು ನಾಯಕರು ಬೇಸರಗೊಂಡಿದ್ದು, ಕಾಂಗ್ರೆಸ್ ಸೇರ್ಪಡೆಗಾಗಿ ನನ್ನ ಸಂಪರ್ಕದಲ್ಲಿದ್ದಾರೆ. ದೇವೇಗೌಡರು ಈಗಲೂ ಸೆಕ್ಯುಲರ್. ಅವರಿಂದ ನಮ್ಮ ಮುಸ್ಲಿಂ ಸಮಾಜಕ್ಕೆ ನ್ಯಾಯ ಸಿಕ್ಕಿದೆ ಮತ್ತು 2ನೇ ಹಂತದ ನಾಯಕರನ್ನೂ ಬೆಳೆಸಿದ್ದಾರೆ. ಆದರೆ, ಕುಮಾರಸ್ವಾಮಿ ಖಂಡಿತವಾಗಿ ಸೆಕ್ಯುಲರ್ ಅಲ್ಲ ಎಂದರು.

Join Whatsapp