ಇಸ್ತ್ರಿಪೆಟ್ಟಿಗೆ, ಕುಕ್ಕರ್ ಸಿದ್ದರಾಮಯ್ಯ ಹಂಚಿಲ್ಲ: ಯತೀಂದ್ರ

Prasthutha|

ಮೈಸೂರು: ‘ಸಿದ್ದರಾಮಯ್ಯ ಅವರು ವರುಣ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲುವುದಕ್ಕಾಗಿ ಮಡಿವಾಳ ಸಮುದಾಯದವರಿಗೆ ಕುಕ್ಕರ್ ಹಾಗೂ ಇಸ್ತ್ರಿಪೆಟ್ಟಿಗೆಗಳನ್ನು ಕೊಟ್ಟಿದ್ದಾರೆ ಎಂದು ಎಲ್ಲಿಯೂ ಹೇಳಿಲ್ಲ. ನಾನು ಮಾತನಾಡುವಾಗ ಸರಿಯಾಗಿ ಮಾತನಾಡಿಲ್ಲದಿರಬಹುದಷ್ಟೆ’ ಎಂದು ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -


ಕುಕ್ಕರ್ ಹಾಗೂ ಇಸ್ತ್ರಿಪೆಟ್ಟಿಗೆ ಹಂಚಿಕೆ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, ‘ನಾನು ಹೇಳಿರುವುದೇ ಒಂದು, ಸಾಮಾಜಿಕ ಮಾಧ್ಯಮ–ದೃಶ್ಯ ಮಾಧ್ಯಮದಲ್ಲಿ ತೋರಿಸುತ್ತಿರುವುದೇ ಒಂದು. ನನ್ನ ಹೇಳಿಕೆ ಆ ರೀತಿಯ ಅರ್ಥ ಕೊಟ್ಟಿರಲೂಬಹುದು. ಆದರೆ, ಚುನಾವಣೆಗೋಸ್ಕರ ಸಿದ್ದರಾಮಯ್ಯ ಕುಕ್ಕರ್ ಕೊಟ್ಟಿದ್ದಾರೆ ಎಂದಿಲ್ಲ’ ಎಂದು ಹೇಳಿದ್ದಾರೆ.

Join Whatsapp