ಮಹಿಳಾ ಮೀಸಲಾತಿ ಜಾರಿಗೆ ತರುವ ಮುನ್ನ ಜಾತಿ ಗಣತಿ-ಡಿಲಿಮಿಟೇಶನ್ ಮಾಡುವ ಅಗತ್ಯವಿದೆ: ರಾಹುಲ್ ಗಾಂಧಿ

Prasthutha|

ನವದೆಹಲಿ: ಮಹಿಳಾ ಮೀಸಲಾತಿ ಮಸೂದೆ ಚೆನ್ನಾಗಿದೆ. ಆದರೆ ಅದನ್ನು ಜಾರಿಗೆ ತರುವ ಮುನ್ನ ಜಾತಿ ಗಣತಿ ಮತ್ತು ಡಿಲಿಮಿಟೇಶನ್ ಮಾಡುವ ಅಗತ್ಯವಿದೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು. ಇದು ಒಬಿಸಿ ಕೋಟಾದಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ತಂತ್ರವಾಗಿದೆ. ಇದನ್ನು ಜಾರಿಗೆ ತರಲಾಗುತ್ತದೆಯೇ ಎಂದು ಯಾರಿಗೂ ತಿಳಿದಿಲ್ಲ ಎಂದು ಹೇಳಿದರು.


ಸತ್ಯವೆಂದರೆ ಇಂದು ಸಂಸತ್ನಲ್ಲಿ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿ ನೀಡಬಹುದು, ಇದು ಸಂಕೀರ್ಣವಾದ ವಿಷಯವಲ್ಲ. ಸರ್ಕಾರ ಇದನ್ನು ದೇಶದ ಮುಂದೆ ಮಂಡಿಸಿದೆ. ಆದರೆ 10 ವರ್ಷಗಳ ನಂತರ ಇದನ್ನು ಜಾರಿಗೆ ತರುತ್ತದೆ. ಇದು ಜಾರಿಗೆ ಬರುತ್ತದೆಯೋ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಅವರು ಹೇಳಿದರು.

Join Whatsapp