ರಾಜೀವ್‌ ಹಂತಕರಂತೆ ತನ್ನನ್ನೂ ಬಿಡುಗಡೆಗೊಳಿಸಲು ಸುಪ್ರೀಂ ಕೋರ್ಟ್ ಮೊರೆ ಹೋದ ಅಪರಾಧಿ

Prasthutha|

- Advertisement -

ಹೊಸದಿಲ್ಲಿ: ರಾಜೀವ್ ಹಂತಕರನ್ನು ಬಿಡುಗಡೆಗೊಳಿಸಿದಂತೆ ತನ್ನನ್ನೂ ಬಿಡುಗಡೆಗೊಳಿಸಬೇಕೆಂದು ಸ್ವಯಂ ಘೋಷಿತ ದೇವಮಾನವನೊಬ್ಬ ಸುಪ್ರೀಂ ಕೋರ್ಟಿಗೆ ಅರ್ಜಿ ಹಾಕಿದ್ದಾನೆ.  

ತನ್ನ ಪತ್ನಿಯನ್ನು ಕೊಂದು 1994ರಿಂದ ಜೈಲಿನಲ್ಲಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿ ಶ್ರದ್ಧಾನಂದ, ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್‌ ಮೊರೆ ಹೋದ ಅಪರಾಧಿ.

- Advertisement -

 ‘ಕಳೆದ 29 ವರ್ಷದಿಂದ ಜೈಲಿನಲ್ಲಿಯೇ ಕಳೆಯುತ್ತಿರುವ ನನಗೆ ಒಂದು ದಿನವೂ ಪೆರೋಲ್‌ ನೀಡಿಲ್ಲ. ಆದರೆ, ರಾಜೀವ್‌ ಗಾಂಧಿ ಹಂತಕರಿಗೆ ಮಾತ್ರ ಹಲವು ಬಾರಿ ಪೆರೋಲ್‌ ನೀಡಲಾಗಿತ್ತು. ಈಗ ಅವರನ್ನು ಕಾರಾಗೃಹದಿಂದಲೂ ಬಿಡುಗಡೆ ಮಾಡಲಾಗಿದೆ. ನನ್ನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ. ಆದ್ದರಿಂದ ಅವರಂತೆ ನನ್ನನ್ನು ಬಿಡುಗಡೆ ಮಾಡಿ’ ಎಂದು ಶ್ರದ್ಧಾನಂದ ತನ್ನ ವಕೀಲ ವರುಣ್‌ ಠಾಕೂರ್‌ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.

ಶ್ರದ್ಧಾನಂದನ ಪತ್ನಿ, ಕೊಲೆಯಾದ ಶಾಖಿರ್‌ ನಮಾಜಿ ಅವರು ಮೈಸೂರಿನ ದಿವಾನರಾಗಿದ್ದ ಸರ್‌ ಮಿರ್ಜಾ ಇಸ್ಮಾಯಿಲ್‌ ಅವರ ಮೊಮ್ಮಗಳಾಗಿದ್ದು, ತನ್ನ ಮೊದಲ ಪತಿ ಅಕ್ಬರ್‌ ಖಲೀಲಿ ಅವರಿಗೆ ವಿಚ್ಛೇದನ ನೀಡಿ, ಶ್ರದ್ಧಾನಂದನನ್ನು 1986ರಲ್ಲಿ ವಿವಾಹವಾಗಿದ್ದರು.

Join Whatsapp