ಹಣ ಸಂಪಾದನೆಯ ಜಾಹೀರಾತು ನೀಡಿ ವಂಚನೆ| 16 ಕಡೆ ಇಡಿ ದಾಳಿ

Prasthutha|

►80 ಬ್ಯಾಂಕ್ ಖಾತೆ ಸೀಜ್‌; 1 ಕೋಟಿ ಜಪ್ತಿ

- Advertisement -

ಬೆಂಗಳೂರು: ನಗರದ ಸೂಪರ್ ಲೈಕ್ ಆನ್ ಲೈನ್ ಅರ್ನಿಂಗ್ಸ್ ಅಪ್ಲಿಕೇಷನ್ ಕಂಪನಿಗೆ ಸಂಬಂಧಿಸಿದ 16 ಕಡೆಗಳಲ್ಲಿ‌ ಇಡಿ ದಾಳಿ ನಡೆಸಿ 1 ಕೋಟಿ ನಗದನ್ನು ಜಪ್ತಿ ಮಾಡಿದೆ ಎಂದು ವರದಿಯಾಗಿದೆ.

ಸೂಪರ್ ಲೈಕ್ ಆನ್ ಲೈನ್ ಅರ್ನಿಂಗ್ಸ್ ಅಪ್ಲಿಕೇಷನ್ ಕಂಪನಿಯು ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಸಂಪಾದಿಸಬಹುದು ಎಂದು ಜಾಹೀರಾತು ನೀಡಿ ವಂಚಿಸಿದ ಆರೋಪವನ್ನು ಎದುರಿಸುತ್ತಿದೆ.

- Advertisement -

ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸುವ ಜಾಹೀರಾತು ನೀಡಿ ಕೋಟ್ಯಾಂತರ ರೂಪಾಯಿ ಹಣ ವಂಚಿಸಿರುವ ಬಗ್ಗೆ ಈ ಹಿಂದೆ ದಕ್ಷಿಣ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆ ಕಂಡುಬಂದಿದ್ದರಿಂದ ಸೆನ್‌ ಪೊಲೀಸರು ಇಡಿಗೆ ಮಾಹಿತಿ ನೀಡಿದ್ದರು.

ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಂಪನಿಗೆ ಸೇರಿದ 16 ಕಡೆಗಳಲ್ಲಿ ದಾಳಿ‌ ನಡೆಸಿ ಕಂಪನಿ ಹೆಸರಿನಲ್ಲಿದ್ದ 80 ಬ್ಯಾಂಕ್ ಅಕೌಂಟ್​​ಗಳನ್ನು‌ ಸೀಜ್‌ ಮಾಡಿ 1 ಕೋಟಿ ರೂ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Join Whatsapp