ಸೋಲುವ ಕಾಂಗ್ರೆಸ್ ಗೆ ಸ್ಥಾನ ಬಿಟ್ಟು ಕೊಡಬೇಕೇ: ಲಾಲು ಪ್ರಸಾದ್ ಯಾದವ್

Prasthutha|

ಪಾಟ್ನಾ: ಬಿಹಾರದಲ್ಲಿ ಸದ್ಯ ಕಾಂಗ್ರೆಸ್ ಮತ್ತು ಆರ್.ಜೆ.ಡಿ ನಡುವೆ ಭಿನ್ನಮತ ಸ್ಫೋಟಗೊಂಡಿದ್ದು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸೋಲಲು ಸ್ಥಾನಗಳನ್ನು ಬಿಟ್ಟುಕೊಡಬೇಕೇ ಎಂದು ಆರ್.ಜೆ.ಡಿ ಮುಖ್ಯಸ್ಥ ಲಾಲು ಪ್ರಸಾದ್ ಖಾರವಾಗಿ ಪ್ರಶ್ನಿಸಿದ್ದಾರೆ.

- Advertisement -

ಮಾತ್ರವಲ್ಲ ಪ್ರಸಕ್ತ ಬಿಹಾರದ ಕಾಂಗ್ರೆಸ್ ನ ಉಸ್ತುವಾರಿಯಾಗಿರುವ ಭಕ್ತಚರಣ್ ದಾಸ್ ರನ್ನು ಅವಿವೇಕಿ ಎಂದು ಲಾಲು ಪ್ರಸಾದ್ ಜರಿಯುವ ಮೂಲಕ ಕಾಂಗ್ರೆಸ್ ಅನ್ನು ತೀವ್ರ ಮುಜುಗರಕ್ಕೀಡುಮಾಡಿದ್ದಾರೆ. ಈ ಹೇಳಿಕೆಯೇ ಕಾಂಗ್ರೆಸ್ ಮತ್ತು ಆರ್.ಜೆ.ಡಿ ನಡುವೆ ರಾಜಕೀಯ ಭಿನ್ನಮತ ಮೂಡಲು ಪ್ರಮುಖ ಕಾರಣ ಎಂದು ವಿಶ್ಲೇಷಕರು ಬಣ್ಣಿಸಿದ್ದಾರೆ.

ಈ ನಡುವೆ ಮಾಧ್ಯಮದವರೊಂದಿಗೆ ಮಾತನಾಡಿದ ಲಾಲು ಪ್ರಸಾದ್, ಸದ್ಯ ಕಾಂಗ್ರೆಸ್ ಗೆಲ್ಲುವ ಸ್ಥಿತಿಯಲ್ಲಿಲ್ಲ. ಸೋಲುವ ಪಕ್ಷದೊಂದಿಗೆ ಮೈತ್ರಿ ಅಥವಾ ಸ್ಥಾನ ಬಿಟ್ಟು ಕೊಡುವುದು ಸೂಕ್ತವೇ ಎಂದು ಪ್ರಶ್ನಿಸಿದರು.

- Advertisement -

ಅಕ್ಟೋಬರ್ 30 ಕ್ಕೆ ಕುಶೇಶ್ವರ ತಾರಪುರ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯ ಹಿನ್ನೆಲೆಯಲ್ಲಿ ಬಿಹಾರದ ಚುನಾವಣಾ ರಂಗ ರಂಗೇರಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ.

Join Whatsapp