ಯೋಧನಿಗೆ ಸೆಲ್ಯೂಟ್: ಬಾಲಕನಿಗೆ ಹ್ಯಾಟ್ಸಾಫ್ ಎಂದ ನೆಟ್ಟಿಗರು..!

Prasthutha: October 25, 2021

ಬೆಂಗಳೂರು : ತನ್ನ ತಂದೆಯ ಕೈ ಹಿಡಿದು ನಡೆದುಕೊಂಡು ಹೋಗುತ್ತಿದ್ದ ಬಾಲಕನೊಬ್ಬ ಸೇನೆಯ ವಾಹನ ನೋಡಿದ ಕೂಡಲೇ ನಿಂತು ಅದರಲ್ಲಿದ್ದ ಯೋಧನಿಗೆ ಸೆಲ್ಯೂಟ್ ಮಾಡಿದ್ದಾನೆ. ಬಾಲಕನ ಸೆಲ್ಯೂಟ್’ಗೆ ವಾಹನದಲ್ಲಿದ್ದ ಯೋಧನೂ ಕೂಡ ಪ್ರತಿ ಸೆಲ್ಯೂಟ್ ನೀಡಿರುವ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಅಭಿಷೇಕ್ ಕುಮಾರ್ ಝಾ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ವೀಡಿಯೋ ಶೇರ್ ಮಾಡಿದ್ದಾರೆ. ಎಲ್ಲರೂ ಹೆಮ್ಮೆ ಪಡುವ ನಿಮಿಷಗಳನ್ನು ತನ್ನ ಸ್ನೇಹಿತ ಚಿತ್ರೀಕರಿಸಿರುವುದಾಗಿ ಅಭಿಷೇಕ್ ಹೇಳಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶಕ್ಕೆ ಹೋಗುವ ದಾರಿಯಲ್ಲಿ ತಂದೆಯ ಕೈ ಹಿಡಿದು ನಡೆದುಕೊಂಡು ಹೋಗುತ್ತಿದ್ದ ಬಾಲಕ ಅಲ್ಲೇ ಇದ್ದ CRPFಗೆ ಸೇರಿದ ವಾಹನದಲ್ಲಿ ಸೈನಿಕರು ಇರುವುದನ್ನು ನೋಡಿ, ಅಲ್ಲೇ ನಿಂತು ಸೈನಿಕರಿಗೆ ಸೆಲ್ಯೂಟ್ ಹೊಡೆದಿದ್ದಾನೆ. ನಗು ಮುಖದಿಂದ ಸೆಲ್ಯೂಟ್ ಸ್ವೀಕರಿಸಿದ ಸೈನಿಕ, ಪ್ರತಿಯಾಗಿ ಬಾಲಕನಿಗೆ ಸೆಲ್ಯೂಟ್ ನೀಡಿದ್ದಾರೆ.

ವೀಡಿಯೋದ ಕೆಳಗಡೆ ಕಮೆಂಟ್ ಮಾಡಿರುವ ಅನೇಕರು ಬಾಲಕನ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಮತ್ತು ಯುವಕರಿಗೆ ದೇಶದ ಬಗ್ಗೆ, ಯೋಧರ ಬಗ್ಗೆ ಗೌರವ ನೀಡುವ ಸಂಸ್ಕೃತಿ ಹೇಳಿಕೊಡಬೇಕು. ನಮ್ಮ ದೇಶ ದೇಶಕ್ಕೆ, ಯೋಧರಿಗೆ ಗೌರವ ನೀಡಬೇಕು. ಈ ವಿಷಯದಲ್ಲಿ ಭಾರತ ಎಂದಿಗೂ ಮುಂದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!