ಷಾಕಿಂಗ್: ನಾಟಿ ಔಷಧಿಗೆ ಬಾಲಕ ಬಲಿ!

Prasthutha|

ಪ್ರೀತಿಯ ಮಗನಿಗೆ ನಾಟಿ ಔಷಧಿ ಕೊಡಿಸಿದ ದಂಪತಿ ಆ ಮಗನನ್ನೇ ಕಳಕೊಂಡ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

- Advertisement -

ಚಿಕ್ಕಬಳ್ಳಾಪುರದ ನಲ್ಲಗುಟ್ಟ ಪಾ‍ಳ್ಯದಲ್ಲಿ ಘಟನೆ ನಡೆದಿದ್ದು, ಔಷಧ ಸೇವಿಸಿ ಮೃತಪಟ್ಟ 7 ವರ್ಷದ ಬಾಲಕನ ತಂದೆ ಹಾಗೂ ಸಹೋದರಿ ಆಸ್ಪತ್ರೆಗೆ ದಾಖಲು ಆಗಿದ್ದಾರೆ.

ಶಶಿಕಲಾ ಹಾಗೂ ಶ್ರೀನಿವಾಸ್ ದಂಪತಿಯ ಪುತ್ರ ವೇದೇಶ್ (7) ಮೃತ ಬಾಲಕ.

- Advertisement -

ಮಗನಿಗೆ ನಾಟಿ ಔಷಧಿ ಕುಡಿಸಿದ ಶ್ರೀನಿವಾಸ್ ತಾನೂ ಕೂಡ ಕುಡಿದು ಮತ್ತೋರ್ವ ಪುತ್ರಿ ವೈಶಾಲಿಗೂ ನೀಡಿದ್ದಾನೆ. ಪರಿಣಾಮ ಕೂಡಲೇ ಎಲ್ಲರೂ ಅಸ್ವಸ್ಥಗೊಂಡಿದ್ದಾರೆ.

ಘಟನೆಯಲ್ಲಿ ತಂದೆ-ಮಗಳು ಆಸ್ಪತ್ರೆ ಸೇರಿದರೆ, 7 ವರ್ಷದ ಬಾಲಕ ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.

ಬಾಲಕ ವೇದೇಶ್ ದೇಹದ ಮೇಲೆ ಗುಳ್ಳೆಗಳಾಗಿದ್ದವು, ಇದಕ್ಕೆ ಗ್ರಾಮದ ಸತ್ಯನಾರಾಯಣ ಎಂಬಾತ ಔಷಧಿ ನೀಡಿದ್ದನು.

ಘಟನೆಯು ನಾಟಿ ಔಷಧಿ ಪಡೆಯುವವರಿಗೆ ಎಚ್ಚರಿಕೆಯ ಸಂದೇಶವೂ ಆಗಿದೆಯೆಂದು ಹೇಳಲಾಗುತ್ತಿದೆ.