ಹರಿಯಾಣದ ಘಟನೆ ಬಗ್ಗೆ ಮೌನವೇಕೆ? ಶಿವಸೇನಾ ಪ್ರಶ್ನೆ

Prasthutha|

ಮುಂಬಯಿ: ಪ್ರತಿಭಟನಕಾರರ ರೈತರ ಮೇಲೆ ಲಾಠಿ ಪ್ರಹಾರ ನಡೆಸಿ ಹತ್ತಕ್ಕೂ ಹೆಚ್ಚು ರೈತರು ಗಾಯಗೊಳ್ಳುವಂತೆ ಮಾಡಿದ ಹರಿಯಾಣ ಪೊಲೀಸರ ಕುಕೃತ್ಯದ ಹಿಂದೆ ಬಿಜೆಪಿ ಸರಕಾರವಿದ್ದು, ಮಹಾರಾಷ್ಟ್ರ ಸರಕಾರದ ಟೀಕಾಕಾರರು ಈ ಘಟನೆಯನ್ನು ಏಕೆ ಖಂಡಿಸುತ್ತಿಲ್ಲ ಎಂದು ಶಿವಸೇನೆ ಪ್ರಶ್ನಿಸಿದೆ.

- Advertisement -


ಹರಿಯಾಣ ಮುಖ್ಯಮಂತ್ರಿ ಖಟ್ಟರ್, ಬಿಜೆಪಿ ನಾಯಕ ಧನ್ಕರ್ ಸಭೆಯೆದುರು ಪ್ರತಿಭಟನೆ ನಡೆಸಲು ರೈತರು ನಿರ್ಧರಿಸಿ ಹೊರಟಿದ್ದರು. ರೈತರನ್ನು ಸಭೆಗೆ ತುಸು ದೂರದಲ್ಲಿ ತಡೆದಿದ್ದರೆ ಅದು ಪ್ರಜಾಪ್ರಭುತ್ವದ ವಿಧಾನ. ಆದರೆ ಹರಿಯಾಣ ಪೊಲೀಸರು ದಾರಿಯಲ್ಲೇ ರೈತರ ಮೇಲೆ ಲಾಠಿ ಚಾರ್ಜ್ ನಡೆಸಿ ಅವರು ಪ್ರತಿಭಟನಾ ಸ್ಥಳ ತಲುಪದಂತೆ ಮಾಡಿದ್ದಾರೆ. ಇದು ಭಾರತದಲ್ಲಿ ಆಡಳಿತ ತಾಲಿಬಾನ್ ಮನೋಭಾವದವರ ಕೈಯಲ್ಲಿದೆ ಎಂದು ರಾಕೇಶ್ ಟಿಕಾಯತ್ ಹೇಳಿರುವುದನ್ನು ಶಿವಸೇನಾ ವಾರ್ತೆ ಸಾಮ್ನಾ ಎತ್ತಿ ಬರೆದಿದೆ.


ಹರಿಯಾಣದ ಉಪ ಮುಖ್ಯಮಂತ್ರಿ ದುಷ್ಯಂತ್ ಸಿಂಗ್ ಚೌತಾಲಾ ಸಹ ರೈತರ ಮೇಲಿನ ಲಾಠಿ ಪ್ರಹಾರ ಖಂಡಿಸುವುದರೊಂದಿಗೆ ಬಿಜೆಪಿಯ ಕುತಂತ್ರವನ್ನು ಅದರ ಮೈತ್ರಿ ಪಕ್ಷಗಳೇ ಒಪ್ಪಿಲ್ಲ ಎಂಬುದನ್ನು ಶಿವಸೇನೆ ಎತ್ತಿ ಹೇಳಿದೆ.



Join Whatsapp