ಬೆಂಗಳೂರಿನ ಬೇಲೂರು, ಅಂಬೇಡ್ಕರ್ ನಗರ ಸ್ಲಂ ತೆರವು ವಿರೋಧಿಸಿ ಆರ್ ಪಿ ಐ ನಿಂದ ಪ್ರತಿಭಟನೆ

Prasthutha|

ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕು ವರ್ತೂರು ಹೋಬಳಿ ಯಮಲೂರು ವ್ಯಾಪ್ತಿಯ ಬೇಲೂರು, ಅಂಬೇಡ್ಕರ್ ನಗರ ಕೊಳಗೇರಿ ನಿವಾಸಿಗಳನ್ನು ತೆರವುಗೊಳಿಸದಂತೆ ಇಂದು ಸಮತಾ ಸೈನಿಕ ದಳ, ಆರ್ ಪಿ ಐ ನೇತೃತ್ವದಲ್ಲಿ ನೂರಾರು ನಿವಾಸಿಗಳು ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.


ಬಳಿಕ ಮಾತನಾಡಿದ ಆರ್.ಪಿ.ಐ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟ ಸ್ವಾಮಿ, ಬೆಂಗಳೂರು ನಗರದ ಮಹದೇವಪುರ ವಿಧಾನ ಸಭಾ ಕ್ಷೇತ್ರದಲ್ಲಿನ ಸರ್ಕಾರಿ ಭೂಮಿಯಲ್ಲಿ ಕಳೆದ ಐವತ್ತು ವರ್ಷಗಳಿಂದ ವಾಸ ಮಾಡುತ್ತಿರುವ ಬೇಲೂರು, ಅಂಬೇಡ್ಕರ್ ನಗರ ಕೊಳೆಗೇರಿ ಮನೆಗಳನ್ನು ತೆರವುಗೊಳಿಸಲು 2019ರಿಂದ ಅಧಿಕಾರಿಗಳು ಪ್ರಯತ್ನ ನಡೆಸಿದ್ದಾರೆ. ಈ ಕಾರ್ಯಾಚರಣೆ ವಿರುದ್ದ 2019ರಲ್ಲಿ ಹೈಕೋರ್ಟ್ ನಲ್ಲಿ ದಾವೆ ಹೂಡಲಾಗಿತ್ತು ಎಂದು ತಿಳಿಸಿದರು.

- Advertisement -


ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಬಫರ್ ವಲಯದಲ್ಲಿ ಇದೆ ಎಂದು ವರದಿ ನೀಡಿ ತೆರವುಗೊಳಿಸಲು ಮುಂದಾಗಿರುವುದು ಸುಳ್ಳಾಗಿದೆ. ಇದೇ ತಿಂಗಳ 31ರಂದು ನ್ಯಾಯಾಲಯದ ಆದೇಶ ಹೊರಬೀಳಲಿದ್ದು. ಬೋರ್ಡ್ ನ ಆಯುಕ್ತರು ಈ ಕುರಿತು ಸತ್ಯಾ ಸತ್ಯತೆಯ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿ ತೆರವುಗೊಳಿಸದಂತೆ ಕ್ರಮ ಕೈ ಗೊಳ್ಳಬೇಕೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಚಂದ್ರ ಶೇಖರ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.

- Advertisement -