ಕೋವಿಡ್‌ ಸಂಕಷ್ಟ ನಿರ್ವಹಿಸುವ ಬದಲು ಬಿಜೆಪಿ ಉ.ಪ್ರ. ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ : ಶಿವಸೇನೆ

Prasthutha|

ಮುಂಬೈ : ಇಡೀ ದೇಶ ಎದುರಿಸುತ್ತಿರುವ ಕೋವಿಡ್‌ ಸಂಕಷ್ಟಗಳನ್ನು ನಿರ್ವಹಿಸುವ ಬದಲು ಬಿಜೆಪಿ ಮುಂದಿನ ವರ್ಷದ ಉತ್ತರ ಪ್ರದೇಶ ಚುನಾವಣೆ ಗೆಲ್ಲಲು ಸಿದ್ಧತೆ ನಡೆಸುತ್ತಿದೆ ಎಂದು ಶಿವಸೇನೆ ನಿರ್ವಹಿಸಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಪಂಚಾಯತ್‌ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡದಿರುವ ಹಿನ್ನೆಲೆಯಲ್ಲಿ, ಹೆಸರು ಉಳಿಸಿಕೊಳ್ಳಲು ಬಿಜೆಪಿ ಶ್ರಮಿಸುತ್ತಿದೆ ಎಂದು ಅದು ಅಭಿಪ್ರಾಯ ಪಟ್ಟಿದೆ.

ಶಿವಸೇನೇಯ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಸೋತ ಬಳಿಕ ಬಿಜೆಪಿ ತನ್ನ ಗಮನವನ್ನು ಉತ್ತರ ಪ್ರದೇಶದತ್ತ ಹರಿಸಿದೆ ಎಂದು ಅಭಿಪ್ರಾಯ ಪಡಲಾಗಿದೆ.

- Advertisement -

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್‌ ಶಾ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್‌ ʼಮಿಶನ್‌ ಉತ್ತರ ಪ್ರದೇಶʼ ಕುರಿತು ಚರ್ಚಿಸಲು ಸಭೆ ನಡೆಸಿದ್ದಾರೆ ಎಂದು ಸಂಪಾದಕೀಯದಲ್ಲಿ ತಿಳಿಸಲಾಗಿದೆ.  

- Advertisement -