ರ‍್ಯಾಂಕಿಂಗ್‌ನಲ್ಲಿ ಕುಸಿತ ಕಂಡ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

Prasthutha: May 26, 2021

ಮಂಗಳೂರು : ದೇಶದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳ 50 ಸ್ಥಾನಗಳ ಪಟ್ಟಿಯಲ್ಲಿ 2019-20ರಲ್ಲಿ 29 ನೇ ರ್‍ಯಾಂಕ್ ಪಡೆದಿದ್ದ ಮಂಗಳೂರು  ಅಂತಾರಾಷ್ಟ್ರೀಯ  ವಿಮಾನ ನಿಲ್ದಾಣವು ಅದಾನಿ ಗ್ರೂಪ್ ಆಫ್ ಕಂಪೆನಿ ತೆಕ್ಕೆಗೆ ಪಡೆದ ನಂತರ  2020-21ನೇ ಸಾಲಿನಲ್ಲಿ ಶ್ರೇಯಾಂಕ ಪಟ್ಟಿಯಲ್ಲಿ 31 ನೇ ಸ್ಥಾನಕ್ಕೆ ಕುಸಿದಿದೆ. 2019-20ರಲ್ಲಿ ಮಂಗಳೂರು ವಿಮಾನ ನಿಲ್ದಾಣದ ಮೂಲಕ ವಾರ್ಷಿಕ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸೇರಿ ಒಟ್ಟಾರೆ 18,76,294 ಪ್ರಯಾಣಿಕರ ನಿರ್ವಹಣೆಯಾಗಿತ್ತು. ಈ ಸಂಖ್ಯೆ 2020-21ನೇ ಸಾಲಿನಲ್ಲಿ ಶೇ.67.2ರಷ್ಟು ಕುಸಿತ ಕಂಡು, ಕೇವಲ 6,14,845 ಪ್ರಯಾಣಿಕರ ನಿರ್ವಹಣೆ ಆಗಿತ್ತು. ಒಟ್ಟು ಪ್ರಯಾಣಿಕರ ನಿರ್ವಹಣೆಯಲ್ಲಿ 2019-20ರಲ್ಲಿ29ನೇ ರಾರ‍ಯಂಕ್‌ನಲ್ಲಿದ್ದ ಮಂಗಳೂರು ವಿಮಾನ ನಿಲ್ದಾಣ ಈಗ ಎರಡು ಸ್ಥಾನಕ್ಕೆ ಕುಸಿದು 31ನೇ ಸ್ಥಾನಕ್ಕೆ ಇಳಿದಿದೆ.

2020-21ನೇ ಸಾಲಿನಲ್ಲಿ 1,52,434 ಅಂತಾರಾಷ್ಟ್ರೀಯ ಪ್ರಯಾಣಿಕರು ಸಂಚರಿಸಿದ್ದು, ಶೇ.73.3ರಷ್ಟು ಕುಸಿತ ದಾಖಲಿಸಿತ್ತು. 2019-20ರಲ್ಲಿ ಒಟ್ಟು 5,71,226 ಪ್ರಯಾಣಿಕರ ನಿರ್ವಹಣೆಯಾಗಿತ್ತು. ಇದೇ ಅವಧಿಯಲ್ಲಿ 4,62,411 ದೇಶೀಯ ಪ್ರಯಾಣಿಕರ ನಿರ್ವಹಣೆಯಾಗಿದ್ದು, ಶೇ.75.9ರಷ್ಟು ಕುಸಿತ ದಾಖಲಾಗಿದೆ. 2019-20ರಲ್ಲಿ ಒಟ್ಟು 13,05,068 ಪ್ರಯಾಣಿಕರ ನಿರ್ವಹಣೆಯಾಗಿತ್ತು. 2020-21ರಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ಎರಡೂ ವರ್ಗದಲ್ಲಿಒಟ್ಟು 6,14,845 ಪ್ರಯಾಣಿಕರ ನಿರ್ವಹಣೆಯಾಗಿದೆ. 2019-20ರಲ್ಲಿ ಈ ಸಂಖ್ಯೆ 18,76,294 ಆಗಿತ್ತು.

ಲಾಕ್‌ಡೌನ್‌ನ ದುಷ್ಪರಿಣಾಮಗಳು ಮತ್ತು ಪ್ರಯಾಣಿಕರೊಂದಿಗೆ ವಿಮಾನ ನಿಲ್ದಾಣದ ಸಿಬ್ಬಂದಿಗಳ ವರ್ತನೆಯಿಂದ  ಪ್ರಯಾಣಿಕರ ಓಡಾಟದಲ್ಲಿ ಗಮನಾರ್ಹವಾದ ಕುಂಠಿತವಾದ ಕಾರಣದಿಂದಾಗಿ ವಿಮಾನ ನಿಲ್ದಾಣದಿಂದ ಮೂಲಕ ಕಡಿಮೆ ಸಂಖ್ಯೆಯ ವಿಮಾನಗಳು ಕಾರ್ಯನಿರ್ವಹಿಸಿದ ಪರಿಣಾಮ ಶ್ರೇಯಾಂಕವು ಕುಸಿದಿದೆ ಎಂದು ತಿಳಿದುಬಂದಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!