ಬೆಂಗಳೂರು: ಹಿನ್ನೆಲೆ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದ ಮೊದಲ ಕನ್ನಡಿಗ, ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಹೃದಯಾಘಾತದಿಂದ ತನ್ನ 83 ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ
ಕುವೆಂಪು ರಚಿಸಿದ ಹಾಡುಗಳ ನಿರೂಪಣೆಯಿಂದ ಜನಪ್ರಿಯರಾದ ಸುಬ್ಬಣ್ಣ. ಕುವೆಂಪು ಅವರು ಬರೆದ ಬಾರಿಸು ಕನ್ನಡ ಡಿಂಡಿಮವವನ್ನು ಹಾಡಿದ ನಂತರ ಕನ್ನಡಿಗರ ಮನೆಮಾತಾದರು.
ಕಾಡು ಕುಡುರೆ ಚಿತ್ರದಲ್ಲಿ ಕಾಡು ಕುದುರೆ ಓಡಿ ಬಂಡಿತ್ತಾ ಹಾಡಿಗೆ ಸುಬ್ಬಣ್ಣ ರಾಷ್ಟ್ರಪ್ರಶಸ್ತಿ ಪಡೆದಿದ್ದು, ರಾಷ್ಟ್ರಪ್ರಶಸ್ತಿ ಪಡೆದ ಕನ್ನಡದ ಮೊದಲ ಹಿನ್ನೆಲೆ ಗಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ವೃತ್ತಿಯಲ್ಲಿ ವಕೀಲರಾಗಿದ್ದ ಸುಬ್ಬಣ್ಣ ದಿ ಹಿಂದೂ, ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು.
ಸುಬ್ಬಣ್ಣ ಪತ್ನಿ, ಪುತ್ರ ಮತ್ತು ಮಗಳು ಹಾಗೂ ಲಕ್ಷಾಂತರ ಸಂಗೀತ ಪ್ರೇಮಿಗಳನ್ನು ಅಗಲಿದ್ದಾರೆ