ಫೆಲೆಸ್ತೀನ್‌ನಲ್ಲಿ ಮಕ್ಕಳನ್ನು ಕೊಲ್ಲುತ್ತಿರುವುದು ಆತ್ಮಸಾಕ್ಷಿಯಿಲ್ಲದ ಕೃತ್ಯ

Prasthutha|

►ಇಸ್ರೇಲ್ ಕೃತ್ಯ ಖಂಡಿಸಿದ ಸಂಯುಕ್ತ ರಾಷ್ಟ್ರಗಳ ಮಾನವ ಹಕ್ಕುಗಳ ಹೈಕಮಿಷನರ್

- Advertisement -

ನ್ಯುಯಾರ್ಕ್: ಫೆಲೆಸ್ತೀನ್‌ನ ಇಸ್ರೇಲ್ ಆಕ್ರಮಿತ ಪ್ರದೇಶದಲ್ಲಿ ಕೇವಲ ಈ ವರ್ಷವೊಂದರಲ್ಲೇ ಸುಮಾರು 40ರಷ್ಟು ಮಕ್ಕಳು ಇಸ್ರೇಲ್ ಆಕ್ರಮಣಕ್ಕೆ ಬಲಿಯಾಗಿದ್ದು, ಇದು ಆತ್ಮಸಾಕ್ಷಿಯಿಲ್ಲದ ನಡೆಯಾಗಿದೆ ಎಂದು ಸಂಯುಕ್ತ ರಾಷ್ಟ್ರಗಳ (UN) ಮಾನವ ಹಕ್ಕುಗಳ ಹೈ ಕಮಿಷನರ್ ಖಂಡಿಸಿದ್ದಾರೆ.

ಈ ಕುರಿತಂತೆ ಹೇಳಿಕೆ ನೀಡಿರುವ ಸಂಯುಕ್ತ ರಾಷ್ಟ್ರಗಳ (UN) ಮಾನವ ಹಕ್ಕುಗಳ ಹೈ ಕಮಿಷನರ್ ಮಿಶೆಲ್ ಬ್ಯಾಚ್‌ಲೆಟ್, ಆಕ್ರಮಣದ ಸಂದರ್ಭಗಳಲ್ಲಿ ಇಸ್ರೇಲ್ ಪಡೆ ಮಕ್ಕಳ ಮೇಲೆ ಮಾರಕಾಸ್ತ್ರಗಳಿಂದ ಬಲಪ್ರಯೋಗ ಮಾಡುತ್ತಿದ್ದು, ಇದು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಆಕ್ರಮಿತ ಫೆಲೆಸ್ತೀನ್‌ನಲ್ಲಿ ಮಕ್ಕಳು ಸಹಿತ ಅತೀ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಈ ವರ್ಷ ಇಸ್ರೇಲ್ ಆಕ್ರಮಣಕ್ಕೆ ಬಲಿಯಾಗಿದ್ದು, ಇದು ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದಾಳಿಯ ಸಂದರ್ಭಗಳಲ್ಲಿ ಯಾವುದೇ ಮಕ್ಕಳಿಗೆ ನೋವುಂಟು ಮಾಡುವುದು ಅತ್ಯಂತ ಹೇಯ ಕೃತ್ಯ. ಅಲ್ಲದೇ ದಾಳಿಯ ವೇಳೆ ಮಕ್ಕಳನ್ನು ಕೊಲ್ಲುವುದು, ಗಾಯಗೊಳಿಸುವುದು ಆತ್ಮಸಾಕ್ಷಿಯಿಲ್ಲದ ಪ್ರಕ್ರಿಯೆಯಾಗಿದೆ ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.



Join Whatsapp