ಶಿವ ಗಾಂಜಾ ವ್ಯಸನಿಗಳ ಗುರು: ವಿವಾದ ಮೈಮೇಲೆ ಎಳೆದುಕೊಂಡ ಸಿಪಿಐಎಂ ಸಂಸದ ಬಿಕಾಶ್ ರಂಜನ್ ಭಟ್ಟಾಚಾರ್ಯ

Prasthutha|

ಕೋಲ್ಕತ್ತಾ: ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಸಂಸದ ಬಿಕಾಶ್ ರಂಜನ್ ಭಟ್ಟಾಚಾರ್ಯ ಹಿಂದೂ ಧಾರ್ಮಿಕ ನಂಬಿಕೆ ಶಿವನ ಕುರಿತು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ನನ್ನ ಬಾಲ್ಯದಲ್ಲಿ ಪೋಸ್ಟ್‌ಮ್ಯಾನ್ ಒಬ್ಬ ಕುಡಿದು ಶಿವ ದೇವಾಲಯಕ್ಕೆ ಒದೆಯುವುದನ್ನು ನೋಡಿದ್ದೇನೆ. ಆತ ತನ್ನ ಕುಟುಂಬವನ್ನು ನೋಡಿಕೊಳ್ಳುವಂತೆ ಮಹಾದೇವನನ್ನು ಬೇಡಿಕೊಳ್ಳುತ್ತಿದ್ದನು ಎಂದು ಬರೆದಿದ್ದಾರೆ. ಅಷ್ಟು ಮಾತ್ರವಲ್ಲದೆ, ಮಹಾದೇವ (ಶಿವ) ಮದ್ಯ ಮತ್ತು ಗಾಂಜಾ ಸೇವನಿಗಳ ಗುರು. ಕುಡುಕರು ತಮ್ಮ ಕುಟುಂಬಗಳನ್ನು ಶಿವ ನೋಡಿಕೊಳ್ಳುತ್ತಾನೆ ಎಂಬ ನಂಬಿಕೆಯಿಂದ ಕುಡಿದು ಹಲವಾರು ಕುಟುಂಬ ನಾಶವಾಗಿವೆ. ಹಾಗೆ ನಾಶವಾದ ಕುಟುಂಬಗಳ ಸಂಖ್ಯೆಯನ್ನು ಯಾರು ಲೆಕ್ಕ ಹಾಕುತ್ತಿದ್ದಾರೆ ಎಂದು ಕೇಳಿದ್ದಾರೆ.

- Advertisement -

ಮುಂದುವರೆದು, ಕಾಳಿಘಾಟ್‌ನ ನಕುಲೇಶ್ವರ ಲೇನ್ ಮಹಾಕಾಳಿ ಪಾಠಶಾಲೆಯ ಸಮೀಪವಿರುವ ಕಿರಿದಾದ ರಸ್ತೆಯಲ್ಲಿ ನೀವು ಮಾಹಿಮ್ ಹಲ್ದರ್ ಸ್ಟ್ರೀಟ್‌ನಿಂದ ನಕುಲೇಶ್ವರ ಲೇನ್‌ಗೆ ಪ್ರವೇಶಿಸಿದರೆ ಒಂದು ಸಣ್ಣ ಶಿವನ ದೇವಸ್ಥಾನವನ್ನು ಕಾಣಬಹುದು. ಒಂದು ದಿನ ಸಂಜೆ ಅಮಲೇರಿದ ಸ್ಥಿತಿಯಲ್ಲಿದ್ದ ಏರಿಯಾದ ಪೋಸ್ಟ್‌ಮ್ಯಾನ್ ದೇವಸ್ಥಾನದ ಮುಂದೆ ಒದ್ದಾಡುತ್ತಾ ‘ಬಾಬಾ ಬಾಬಾ, ನೀವು ಮದ್ಯ ಮತ್ತು ಗಾಂಜಾದ ಪ್ರಭುವಾಗಿರುವುದರಿಂದ, ನೀವು ಕುಡಿಯುವವರ ಕುಟುಂಬಗಳನ್ನು ನೋಡಿಕೊಳ್ಳಬೇಕು ಎಂದು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರು ಎಂದು ಬರೆದಿದ್ದಾರೆ. ನಾನು ಅವರ ಪ್ರಾರ್ಥನೆಯನ್ನು ಕೇಳಿ ಆನಂದಿಸಿದೆ. ಶಿವನನ್ನು ಗಾಂಜಾ ವ್ಯಸನಿಗಳ ಗುರು ಎಂದು ಬಡ ಪೋಸ್ಟ್‌ಮ್ಯಾನ್ ನಂಬುತ್ತಾರೆ. ಆದ್ದರಿಂದ, ಕುಡುಕರ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಮಹದೇವ ತೆಗೆದುಕೊಳ್ಳಬೇಕು ಎಂದು ಭಟ್ಟಾಚಾರ್ಯ ಬರೆದಿದ್ದಾರೆ.

ಸಿಪಿಐಎಂ ಸಂಸದನ ಟೀಕೆಗಳು ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್, ಕಮ್ಯುನಿಸ್ಟ್ ಪಕ್ಷವು ಹಿಂದೂ ವಿರೋಧಿ ಮತ್ತು ಯಾವಾಗಲೂ ಸನಾತನ ಧರ್ಮ’ದ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.