ಶಿವಮೊಗ್ಗ ಗಲಾಟೆ ಪ್ರಕರಣ: 24 ಜನರ ವಿರುದ್ಧ FIR ದಾಖಲು

Prasthutha|

ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಜಿಲ್ಲೆಯ ರಾಗಿಗುಡ್ಡದಲ್ಲಿ ಗಲಾಟೆ ಪ್ರಕರಣ ಸಂಬಂಧ 24 ಜನರ ವಿರುದ್ಧ FIR ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಹೇಳಿದ್ದಾರೆ.

- Advertisement -


ಪ್ರಕರಣ ಸಂಬಂಧ ಎಂಟು ಜನರು ತಲೆಮರೆಸಿಕೊಂಡಿದ್ದಾರೆ.


60 ಮಂದಿಯನ್ನು ವಿಚಾರಣೆ ಮಾಡಲಾಗಿದೆ ಎಂದು ಹೇಳಿದ ಮಿಥುನ್ ಕುಮಾರ್, ವಿಡಿಯೋ, ಫೋಟೋ ಆಧರಿಸಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಕಲ್ಲು ತೂರಾಟ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.